ದೇಶ ವಿರೋಧಿ ಘೋಷಣೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ: ಡಿಸಿಎಂ ಅಶ್ವಥ್ ನಾರಾಯಣ

Update: 2020-02-22 11:59 GMT

ಬೆಂಗಳೂರು, ಫೆ. 22: ಪದೇ ಪದೇ ದೇಶವಿರೋಧಿ ಘೋಷಣೆ ಕೂಗುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯುವಕರು, ಯುವತಿಯರು ಇಂಥ ಕೃತ್ಯಗಳಿಗೆ ಮುಂದಾಗುತ್ತಿರುವುದು ದುರದೃಷ್ಟಕರ. ಇದರ ಹಿಂದೆ ಕೆಲವರ ಕೈವಾಡ ಇದ್ದು ಅದರ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಎಂದರೆ ಏನು? ಅದರಿಂದಾಗುವ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಕೆಲಸವನ್ನು ಮಾಡಲಾಗುವುದು ಎಂದ ಅವರು, ಸಮಾಜದಲ್ಲಿ ವಿನಾಕಾರಣ ಗೊಂದಲ ನಿರ್ಮಾಣ ಮಾಡುತ್ತಿರುವುದು ದುಃಖಕರ. ಎಲ್ಲ ಪಕ್ಷಗಳ ಮುಖಂಡರೂ ಇದನ್ನು ಗಮನಿಸಬೇಕು ಎಂದರು.

ಸಿಎಎ ಬಗ್ಗೆ ಅಮಾಯಕರು, ಮುಗ್ಧರಲ್ಲಿ ಗೊಂದಲ ಮೂಡಿಸಬಾರದು. ಪ್ರತಿಭಟನೆ ಸಂವಿಧಾನಿಕ ಹಕ್ಕು. ಆದರೆ ಇಂತಹ ಕೃತ್ಯಗಳು ಆದಾಗ ಸಂಘಟಕರನ್ನು ಗುರುತಿಸಿ, ಅವರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಅಶ್ವಥ್ ನಾರಾಯಣ ಇದೇ ವೇಳೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News