ಒಮಾನ್ ಕ್ರಿಕೆಟಿಗನಿಗೆ ಏಳು ವರ್ಷ ನಿಷೇಧ

Update: 2020-02-24 18:38 GMT

ಹಾಂಕಾಂಗ್, ಫೆ.24: ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಒಮಾನ್‌ನ ಯೂಸುಫ್ ಅಬ್ದುಲ್‌ರಹೀಂ ಅಲ್ ಬಲುಶಿಗೆ ಏಳು ವರ್ಷಗಳ ಕಾಲ ಆಜೀವ ನಿಷೇಧ ಹೇರಲಾಗಿದೆ ಎಂದು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಸೋಮವಾರ ತಿಳಿಸಿದೆ. ಕಳೆದ ವರ್ಷ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ಪುರುಷರ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯ ಫಿಕ್ಸಿಂಗ್‌ಗೆ ಮೂಲವಾಗಿದ್ದ್ದು ಯೂಸುಫ್ ವಿರುದ್ಧ ನಾಲ್ಕು ಪ್ರಕರಣ ದಾಖಲಾಗಿದೆ.

29ರ ಹರೆಯದ ಯೂಸುಫ್ ಪಂದ್ಯವನ್ನು ಫಿಕ್ಸ್ ಮಾಡಲು ಯತ್ನಿಸಿದ್ದಲ್ಲದೆ, ಯಾರು ಫಿಕ್ಸ್ ಮಾಡಲು ಸಿದ್ಧರಿದ್ದಾರೆಂಬ ಕುರಿತು ಸಹ ಆಟಗಾರರ ಪಟ್ಟಿಯನ್ನು ಸಿದ್ದಪಡಿಸಿದ್ದರು ಎಂದು ಐಸಿಸಿ ತಿಳಿಸಿದೆ. ‘‘ಆಟಗಾರನೊಬ್ಬ ಪಂದ್ಯ ಫಿಕ್ಸಿಂಗ್ ಮಾಡಲು ಯತ್ನಿಸಿರುವುದು ಅತ್ಯಂತ ಗಂಭೀರ ವಿಚಾರ. ಆದರೆ, ಪ್ರತಿಷ್ಠಿತ ಪಂದ್ಯದಲ್ಲಿ ಸಹ ಆಟಗಾರರು ಭ್ರಷ್ಟಾಚಾರ ಚಟುವಟಿಕೆಯಲ್ಲಿ ಭಾಗಿಯಾಗಲು ಯತ್ನಿಸುವ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ’’ ಎಂದು ಐಸಿಸಿ ಪ್ರಧಾನ ಪ್ರಬಂಧಕ ಅಲೆಕ್ಸ್ ಮಾರ್ಷಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News