ಕೊರೋನವೈರಸ್ ಹೆಸರಲ್ಲಿ ಭೀತಿ ಹರಡುತ್ತಿರುವ ಅಮೆರಿಕ: ಇರಾನ್ ಆರೋಪ

Update: 2020-02-26 17:18 GMT

ಟೆಹರಾನ್ (ಇರಾನ್), ಫೆ. 26: ಕೊರೋನವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ, ಇರಾನ್‌ನಲ್ಲಿ ‘ಭೀತಿಯನ್ನು’ ಹರಡಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಬುಧವಾರ ಆರೋಪಿಸಿದ್ದಾರೆ.

ಕೊರೋನವೈರಸ್ ಸೋಂಕಿನಿಂದಾಗಿ ಇರಾನ್‌ನಲ್ಲಿ 15 ಮಂದಿ ಮೃತಪಟ್ಟಿದ್ದಾರೆ.

‘‘ಈಗಾಗಲೇ ಇರಾನ್‌ನಲ್ಲಿ ಕೊರೋನವೈರಸ್ ದಾಂಧಲೆ ನಡೆಸುತ್ತಿದೆ. ಅದನ್ನೂ ಮೀರಿ ‘ಅಗಾಧ ಭೀತಿ’ ಎಂಬ ಹೆಸರಿನ ಇನ್ನೊಂದು ಹೊಸ ವೈರಸನ್ನು ನಮ್ಮ ಮೇಲೆ ಹೇರಲು ನಾವು ಅಮೆರಿಕಕ್ಕೆ ಅವಕಾಶ ನೀಡಬಾರದು’’ ಎಂದು ವಾರದ ಸಂಪುಟ ಸಭೆಯಲ್ಲಿ ಮಾತನಾಡಿದ ಇರಾನ್ ಅಧ್ಯಕ್ಷರು ಹೇಳಿದರು.

ಕೊರೋನವೈರಸ್ ಸೋಂಕಿಗೆ ಸಂಬಂಧಿಸಿದ ಮಾಹಿತಿಯನ್ನು ಇರಾನ್ ಬಚ್ಚಿಡುತ್ತಿದೆ ಎಂಬುದಾಗಿ ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಆರೋಪಿಸಿದ ಒಂದು ದಿನದ ಬಳಿಕ ರೂಹಾನಿ ಈ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News