ನಡಾಲ್ ಕ್ವಾರ್ಟರ್ ಫೈನಲ್ ಗೆ ಲಗ್ಗೆ

Update: 2020-02-27 18:33 GMT

ಲಾಸ್ ಏಂಜಲಿಸ್, ಫೆ.27: ಸರ್ಬಿಯದ ಯುವ ಆಟಗಾರ ಮಿಯೊಮಿರ್ ಕೆಮಾನೊವಿಕ್‌ರನ್ನು ಮಣಿಸಿದ ವಿಶ್ವದ ನಂ.2ನೇ ಆಟಗಾರ ರಫೆಲ್ ನಡಾಲ್ ಕ್ವಾರ್ಟರ್ ಫೈನಲ್ ತಲುಪಿದರು. ಈ ಮೂಲಕ ಮೂರನೇ ಬಾರಿ ಎಟಿಪಿ ಮೆಕ್ಸಿಕೊ ಓಪನ್ ಪ್ರಶಸ್ತಿ ಜಯಿಸುವತ್ತ ಹೆಜ್ಜೆ ಇಟ್ಟಿದ್ದಾರೆ.

ಇಲ್ಲಿ ಬುಧವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ನಡಾಲ್ 20ರ ಹರೆಯದ ಮಿಯೊಮಿರ್‌ರನ್ನು 6-2, 7-5 ಸೆಟ್‌ಗಳ ಅಂತರದಿಂದ ಮಣಿಸಿದರು. ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಉಳಿಸಿಕೊಳ್ಳುವ ವಿಶ್ವಾಸ ಮೂಡಿಸಿದರು.

‘‘ಮಿಯೊಮಿರ್ ಅಪಾಯಕಾರಿ ಆಟಗಾರ. ಯುವ ಆಟಗಾರನಾಗಿದ್ದರೂ ಅಪಾರ ಶಕ್ತಿ ಆತನಲ್ಲಿದೆ. ಈ ಗೆಲುವಿನಿಂದ ನನಗೆ ಸಂತೋಷವಾಗಿದೆ. ನಾನು ಮೊದಲ ಸೆಟ್‌ನಲ್ಲಿ ಚೆನ್ನಾಗಿ ಆಡಿದ್ದೆ. ಇದು ನನಗೆ ಅತ್ಯಂತ ಮುಖ್ಯವಾಗಿತ್ತು. ಇದು ನನಗೆ ಆತ್ಮವಿಶ್ವಾಸವನ್ನು ನೀಡಿದೆ’’ ಎಂದು ನಡಾಲ ಹೇಳಿದ್ದಾರೆ. ನಡಾಲ್ ಮುಂದಿನ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಕ್ವಾನ್ ಸೂನ್-ವೂರನ್ನು ಎದುರಿಸಲಿದ್ದಾರೆ. 8ನೇ ಶ್ರೇಯಾಂಕದ ಡುಸಾನ್ ಲಾಜೊವಿಕ್‌ರನ್ನು 7-6(7/2), 6-0 ಸೆಟ್‌ಗಳ ಅಂತರದಿಂದ ಮಣಿಸಿದ ಸೂನ್-ವೂ ನಾಲ್ಕನೇ ಬಾರಿ ಕ್ವಾರ್ಟರ್ ಫೈನಲ್ ತಲುಪಿದರು. ಪುಣೆ, ನ್ಯೂಯಾರ್ಕ್ ಹಾಗೂ ಡೆಲ್ರೆ ಬೀಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೂನ್-ವೂ ಅಂತಿಮ-8ರ ಹಂತ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News