×
Ad

ದಿಲ್ಲಿ ಗಲಭೆಕೋರರನ್ನು ಬಂಧಿಸಿ, ಬಾಧಿತರಿಗೆ ನಷ್ಟ ಪರಿಹಾರ ನೀಡಿ

Update: 2020-03-01 20:21 IST

ಬೆಂಗಳೂರು, ಮಾ.1: ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸೆಗೆ ಪ್ರಚೋದನೆ ನೀಡಿದವರನ್ನು, ಗಲಭೆಕೋರರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಬಾಧಿತರಿಗೆ ನಷ್ಟ ಪರಿಹಾರ ನೀಡಬೇಕೆಂದು ಸಮಾನ ಮನಸ್ಕರರು ಆಗ್ರಹಿಸಿದರು.

ರವಿವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ವಕೀಲರು ಮತ್ತು ಸಮಾನ ಮನಸ್ಕರ ಚಿಂತಕರು, ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸೆಯನ್ನು ಖಂಡಿಸಿ, ನಾಗರಿಕ ಸಮಾಜ ಕ್ಷಮೆಯಾಚಿಸಬೇಕು ಎಂದರು.

ದೆಹಲಿಯ ಗಲಭೆಯಲ್ಲಿ 38ಕ್ಕೂ ಹೆಚ್ಚು ಜನರ ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಲಭೆಯನ್ನು ತಡೆಯಬೇಕಿದ್ದ ಪೊಲೀಸರು ಮೂಕಪ್ರೇಕ್ಷಕರಾಗಿ ಗಲಭೆಕೋರರಿಗೆ ಬೆಂಬಲ ನೀಡಿದ್ದಾರೆ. ಘಟನೆಯ ಬಗ್ಗೆ ವರದಿ ಮಾಡಲು ಹೊರಟಿದ್ದ ಪತ್ರಕರ್ತರ ಮೇಲೂ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದರು.

ಗಲಭೆಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್, ಕಪಿಲ್ ಮಿಶ್ರ ಪ್ರಚೋದನಾತ್ಮಕ ಹೇಳಿಕೆಗಳೇ ಕಾರಣ. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ದೆಹಲಿಯ ಹೈಕೋಟ್ ನ್ಯಾಯಾಧೀಶ ಮುರಳಿಧರ್ ಅವರನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿರುವ ಕೇಂದ್ರ ಸರಕಾರದ ನಡೆ ಗಲಭೆಯ ಹಿಂದಿರುವ ಅನುಮಾನ ವ್ಯಕ್ತವಾಗಿದೆ ಎಂದು ದೂರಿದರು.

ಗಲಭೆಯ ನಡುವೆ ಕೆಲ ಮುಸ್ಲಿಂ, ಹಿಂದು ಪರಸ್ಪರ ಸಹಕಾರಕ್ಕೆ ಬಂದು ಸೌಹಾರ್ದತೆ ಕಾಪಾಡುತ್ತಿದ್ದು, ಗಲಭೆಗೆ ಕಾಯ್ದೆಯ ಪರ ಹಿಂಸಾತ್ಮಕ ಹೋರಾಟಗಾರರೇ ಕಾರಣ. ಅವರನ್ನು ಪತ್ತೆ ಹಚ್ಚಿ ನಷ್ಟದ ಹಾನಿ ಭರಿಸಿ ಉಗ್ರ ಶಿಕ್ಷೆಗೊಳಪಡಿಸಬೇಕು. ದೇಶದ ಜನರ ಅಭಿಪ್ರಾಯಕ್ಕೆ ಮಣಿದು ಕೇಂದ್ರ ಸರಕಾರ ವಿವಾದಿತ ಕಾಯ್ದೆ ವಾಪಸ್ ಪಡೆಯಲು ಮಧ್ಯ ಪ್ರವೇಶ ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್.ಎ.ಅಹ್ಮದ್, ಸೂರ್ಯ ಮುಕುಂದರಾಜ್, ಬಿಂದು ಶ್ರೀ ಗೌಡ, ಕೆ.ಬಿ.ಕೆ.ಸ್ವಾಮಿ, ಗಂಗಾಧರ್, ಶರವಣ, ಮಂಜು,ಕಾಶಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News