ಎಟಿಪಿ ಮೆಕ್ಸಿಕೊ ಓಪನ್ : ರಫೆಲ್ ನಡಾಲ್ ಚಾಂಪಿಯನ್

Update: 2020-03-02 04:25 GMT

ಲಾಸ್ ಏಂಜಲಿಸ್, ಮಾ.1: ಎಟಿಪಿ ಮೆಕ್ಸಿಕೊ ಓಪನ್ ಫೈನಲ್‌ನಲ್ಲಿ ಶನಿವಾರ ಶ್ರೇಯಾಂಕರಹಿತ ಟೇಲರ್ ಫ್ರಿಟ್ಜ್‌ರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿದ ವಿಶ್ವದ ನಂ.2ನೇ ಆಟಗಾರ ರಫೆಲ್ ನಡಾಲ್ 2020ರಲ್ಲಿ ಮೊದಲ ಪ್ರಶಸ್ತಿ ತನ್ನದಾಗಿಸಿಕೊಂಡರು.

ಪುರುಷರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ 33ರ ಹರೆಯದ ನಡಾಲ್ ಅವರು ಟೇಲರ್‌ರನ್ನು 6-3, 6-2 ನೇರ ಸೆಟ್‌ಗಳಿಂದ ಮಣಿಸಿದರು. ಕಳೆದ ತಿಂಗಳು ಆಸ್ಟ್ರೇಲಿಯನ್ ಓಪನ್‌ನ ಕಾರ್ಟ್ವರ್ ಫೈನಲ್‌ನಲ್ಲಿ ಸೋತ ಬಳಿಕ ನಡಾಲ್ ಆಡಿರುವ ಮೊದಲ ಟೂರ್ನಮೆಂಟ್ ಇದಾಗಿದೆ. 2005 ಹಾಗೂ 2013ರ ಬಳಿಕ ಮೂರನೇ ಬಾರಿ ಮೆಕ್ಸಿಕೊ ಓಪನ್ ಪ್ರಶಸ್ತಿಯನ್ನು ಬಾಚಿಕೊಂಡರು. ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಏಳನೇ ಶ್ರೇಯಾಂಕದ ಹೀದರ್ ವಾಟ್ಸನ್ ಕೆನಡಾದ ಯುವ ಆಟಗಾರ್ತಿ ಲೆಲಾಹ್ ಫೆರ್ನಾಂಡಿಸ್‌ರನ್ನು 6-4, 6-7(6/8), 6-1 ಸೆಟ್‌ಗಳ ಅಂತರದಿಂದ ಸೋಲಿಸಿ ಮೂರು ವರ್ಷಗಳ ಬಳಿಕ ಮೊದಲ ಬಾರಿ ಡಬ್ಲುಟಿಎ ಪ್ರಶಸ್ತಿ ಜಯಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News