ಡಿ.ಕೆ.ಎಸ್.ಸಿ. ಯಂಬೂ ಘಟಕದ ಮಹಾಸಭೆ

Update: 2020-03-04 05:51 GMT

ಮದೀನಾ(ಸೌದಿ ಅರೇಬಿಯಾ): ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್‌ (ಡಿ.ಕೆ.ಎಸ್.ಸಿ.) ಯಂಬೂ ಘಟಕದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ  ಯಂಬೂವಿನಲ್ಲಿ ನಡೆಯಿತು.

ಯಂಬೂ ಘಟಕ ಅಧ್ಯಕ್ಷ ರಝಾಕ್ ಹಾಜಿ ಬೆಳ್ತಂಗಡಿ ಸಭಾಧ್ಯಕ್ಷತೆ ವಹಿಸಿದ್ದರು.

ಡಿ.ಕೆ.ಎಸ್.ಸಿ ಸಿಲ್ವರ್ ಜುಬುಲಿ ಸಮಿತಿಯ ಅಧ್ಯಕ್ಷ ಸೈಯದ್ ಮುಹಮ್ಮದ್ ತಂಙಳ್ ಉಚ್ಚಿಲ ಉದ್ಘಾಟಿಸಿದರು. ಕಾರ್ಯದರ್ಶಿ ಹೈದರ್ ಮೂಡಿಗೆರೆ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಚುನಾವಣಾಧಿಕಾರಿಯಾಗಿ ಆಗಮಿಸಿದ ಮಕ್ಕಾ ವಲಯ ಕಾರ್ಯದರ್ಶಿ ಇಕ್ಬಾಲ್ ಹೈದ್ರೋಸ್ ಮೂಡಿಗೆರೆ ಹಳೆಯ ಸಮಿತಿಯನ್ನು ವಜಾಗೊಳಿಸಿ ನೂತನ ಸಮಿತಿಯನ್ನು ರಚಿಸಿದರು.

ನೂತನ ಸಮಿತಿಯ ಅಧ್ಯಕ್ಷರಾಗಿ ಹಾಜಿ ಅಬ್ದುರ್ರರಝಾಕ್ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಹೈದರ್ ಮೂಡಿಗೆರೆ, ಕೋಶಾಧಿಕಾರಿಯಾಗಿ ಇಕ್ಬಾಲ್ ಅರಳ ಆಯ್ಕೆಯಾದರು.

ಗೌರವಾಧ್ಯಕ್ಷರಾಗಿ ಹಸನ್ ಶರೀಫ್ ಸೂರಿಂಜೆ, ಉಪಾಧ್ಯಕ್ಷರಾಗಿ ಸಲೀಂ ಭಟ್ಕಳ ಹಾಗೂ ಆರಿಫ್ ಕೋಡಿ, ಜೊತೆ ಕಾರ್ಯದರ್ಶಿಯಾಗಿ ತೌಸೀಫ್ ನಿಟ್ಟೆ, ಲೆಕ್ಕ ಪರಿಶೋಧಕರಾಗಿ ಮುಹಮ್ಮದ್ ಇಕ್ಬಾಲ್ ಅಲ್ ಫಲಾಹ್ ಕೃಷ್ಣಾಪುರ, ಸಂಚಾಲಕರಾಗಿ ಹುಸೈನ್ ಕಾಪು, ಅಹ್ಮದ್ ಭಟ್ಕಳ ಹಾಗೂ ಆರಿಫ್ ಕಿನ್ನಿಗೋಳಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಲಾಮ್ ಕೆ.ಸಿ.ರೋಡ್, ಮುಸ್ತಫ ಕರಾಯ, ಅಶ್ರಫ್ ಬಂಟ್ವಾಳ, ಅನ್ವರ್ ಉಳ್ಳಾಲ, ಝಮೀರ್ ಕನ್ನಂಗಾರ್, ಮುಸ್ತಫ ಮೂಡುಬಿದಿರೆ, ನಝೀರ್ ಬೆಳ್ತಂಗಡಿ, ಮುಹಮ್ಮದ್ ಅಲಿ ಚಿಕ್ಕಮಗಳೂರು, ಆಬಿದ್ ಪಡುಬಿದ್ರೆ ಇವರನ್ನು ಆಯ್ಕೆ ಮಾಡಲಾಯಿತು.

ಇದೇ ಸಂದರ್ಭ ಡಿ.ಕೆ.ಎಸ್.ಸಿ. ಬೆಳ್ಳಿಹಬ್ಬದ ಪ್ರಯುಕ್ತ 313 ಸದಸ್ಯತ್ವ ಅಭಿಯಾನ ಹಾಗೂ ಡಿ.ಕೆ.ಎಸ್.ಸಿ. ಮಕ್ಕಾ ವಲಯದ ಅಧೀನದಲ್ಲಿ ಜಿದ್ದಾದಲ್ಲಿ ನಡೆಯುವ 'ಫ್ಯಾಮಿಲಿ ಮುಲಾಖಾತ್- 2020' ಆಹ್ವಾನ ಪತ್ರ ಬಿಡುಗಡೆಗೊಳಿಸಲಾಯಿತು

ಡಿ.ಕೆ.ಎಸ್.ಸಿ. ಮದೀನಾ ಮುನವ್ವರ ಘಟಕದ ಅಧ್ಯಕ್ಷ  ಮನ್ಸೂರ್ ಉಚ್ಚಿಲ, ಮುಹಮ್ಮದ್ ಅಲಿ ಪಾಣೆಮಂಗಳೂರು, ಇಕ್ಬಾಲ್ ಕುಪ್ಪೆಪದವು, ಜಿದ್ದಾ ಘಟಕದ ಪ್ರ. ಕಾರ್ಯದರ್ಶಿ ಅಮಾನುಲ್ಲಾ ವಾಮಂಜೂರು ಮತ್ತಿತರರು ಉಪಸ್ಥಿತರಿದ್ದರು.

 ಅಬ್ದುರ್ರಝಾಕ್ ಹಾಜಿ ಸ್ವಾಗತಿಸಿದರು. ಇಕ್ಬಾಲ್ ಕುಪ್ಪೆಪದವು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News