ಪೋಪ್‌ರಿಂದ ಟಿವಿ ನೇರಪ್ರಸಾರ ಮೂಲಕ ರವಿವಾರದ ಪ್ರಾರ್ಥನೆ

Update: 2020-03-07 17:34 GMT

ವ್ಯಾಟಿಕನ್ ಸಿಟಿ (ರೋಮ್), ಮಾ. 7: ನೂತನ-ಕೊರೋನವೈರಸ್ ಭೀತಿಯ ಹಿನ್ನೆಲೆಯಲ್ಲಿ, ಪೋಪ್ ಫ್ರಾನ್ಸಿಸ್ ರವಿವಾರದ ಆ್ಯಂಜೆಲಸ್ ಪ್ರಾರ್ಥನೆಯನ್ನು ಟಿವಿ ನೇರಪ್ರಸಾರದ ಮೂಲಕ ನಡೆಸಿಕೊಡಲಿದ್ದಾರೆ. ಸಾಮಾನ್ಯವಾಗಿ ಸೇಂಟ್ ಪೀಟರ್ಸ್ ಚೌಕದ ಎದುರುಗಡೆ ಇರುವ ತನ್ನ ಕೊಠಡಿಯ ಮಹಡಿಯಲ್ಲಿರುವ ಕೋಣೆಯ ಕಿಟಕಿಯಿಂದ ಪೋಪ್ ಈ ಪ್ರಾರ್ಥನೆಯನ್ನು ನಡೆಸಿಕೊಡುತ್ತಾರೆ.

ವ್ಯಾಟಿಕನ್‌ನಲ್ಲಿ ಮೊದಲ ಕೊರೋನ ಸೋಂಕು ಪತ್ತೆ

ಇಟಲಿಯಲ್ಲಿರುವ ಕ್ರೈಸ್ತ ಧರ್ಮದ ಪೀಠ ವ್ಯಾಟಿಕನ್‌ನಲ್ಲಿ ಮೊದಲ ಕೊರೋನವೈರಸ್ ಸೊಂಕು ಪತ್ತೆಯಾಗಿದೆ ಎಂದು ಶುಕ್ರವಾರ ಪ್ರಕಟಿಸಲಾಗಿದೆ. ಇದರೊಂದಿಗೇ, ನಗರದಲ್ಲಿರುವ ನೂರಾರು ಧರ್ಮಗುರುಗಳು ಮತ್ತು ನಿವಾಸಿಗಳ ರಕ್ಷಣೆಗಾಗಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ವ್ಯಾಟಿಕನ್ ಹೆಲ್ತ್ ಕ್ಲಿನಿಕ್‌ನಲ್ಲಿ ವ್ಯಕ್ತಿಯೊಬ್ಬನಲ್ಲಿ ಕೋವಿಡ್-19 ಸೋಂಕು ಇರುವುದು ಗುರುವಾರ ಪತ್ತೆಯಾಯಿತು ಎಂದು ವ್ಯಾಟಿಕನ್‌ನ ‘ಹೋಲಿ ಸೀ’ಯ ವಕ್ತಾರ ಮ್ಯಾಟಿಯೊ ಬ್ರೂನಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಇಟಲಿಯ ಒಳಗಿರುವ ಸಣ್ಣ ದೇಶ ವ್ಯಾಟಿಕನ್‌ನಲ್ಲಿ ಸುಮಾರು 450 ನಿವಾಸಿಗಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News