ಮೇ 13ರಂದು ಸಾರಿಗೆ ಬಂದ್‌ಗೆ ಕರೆ
ಬೆಂಗಳೂರು, ಮಾ.7: ಸಾರಿಗೆ ನೌಕರರನ್ನು ಸರಕಾರಿ ನೌಕರರನ್ನಾಗಿ ಬಜೆಟ್‌ನಲ್ಲಿ ಘೋಷಣೆ ಮಾಡದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮತ್ತು ಈಶಾನ್ಯ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ನೌಕರರು ಮೇ.13ರಂದು ಬಂದ್‌ಗೆ ಕರೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಐಟಿಯು ರಾಜ್ಯ ಜಂಟಿ ಕಾರ್ಯದರ್ಶಿ ಆನಂದ್, ರಾಜ್ಯ ಸರಕಾರ ನಮ್ಮ ಮನವಿಯನ್ನ ಪುರಸ್ಕರಿಸಿಲ್ಲ, ನಾವು ಸಂಸ್ಥೆಗೆ, ಪ್ರಯಾಣಿಕರಿಗೆ, ಸರಕಾರಕ್ಕೆ ತೊಂದರೆ ನೀಡದೆ ಶಾಂತಿಯುತ ಸತ್ಯಾಗ್ರಹದ ಮೂಲಕ ಮನವಿ ಮಾಡಿದರೂ ಸರಕಾರ ಸ್ಪಂದಿಸಿಲ್ಲ. ಹೀಗಾಗಿ ನಾವು ಗಂಭೀರ ರೂಪದ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ಮೇ.13ರಂದು ಸಾರಿಗೆ ಬಂದ್‌ಗೆ ಕರೆ ನೀಡಿದ್ದು, ಅಷ್ಟರಲ್ಲಿ ಸರಕಾರ ನಮ್ಮ ಮನವಿಗೆ ಸ್ಪಂದಿಸಬೇಕು ಇಲ್ಲವಾದಲ್ಲಿ ನಮ್ಮ ಹೋರಾಟ ಮುಂದುವರೆಯುತ್ತದೆ. ಈ ಸಂಬಂಧ ಸದ್ಯದಲ್ಲೇ ನಮ್ಮ ಎಲ್ಲಾ ಸಂಘಟನೆ ಮುಖಂಡರು ಹಾಗೂ ನೌಕರರ ಜೊತೆ ಸಭೆ ನಡೆಸಿ, ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.