ಆನೆ ದಂತ ಅಕ್ರಮ ಸಾಗಾಟ ಪ್ರಕರಣ: ಐವರ ಬಂಧನ
Update: 2020-03-08 18:03 IST
ಬೆಂಗಳೂರು, ಮಾ.8: ಆನೆ ದಂತ ಅಕ್ರಮ ಸಾಗಾಟ ಪ್ರಕರಣ ಸಂಬಂಧ ಐವರನ್ನು ಬಂಧಿಸಿರುವ ಹೊಸಕೋಟೆಯ ತಿರುಮಲಶೆಟ್ಟಿ ಹಳ್ಳಿ ಠಾಣೆ ಪೊಲೀಸರು, 8 ರಿಂದ 10 ಲಕ್ಷ ಮೌಲ್ಯದ ಆನೆಯ ದಂತ, ಎರಡು ಕಾರು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಬೋಧನಹೊಸಹಳ್ಳಿ ಗ್ರಾಮದ ಬಳಿ ದಾಳಿ ನಡೆಸಿದ ಪೊಲೀಸರ ತಂಡ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಮೂಲದ ಐವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ದುನ್ನಸಂದ್ರ ಕಡೆಯಿಂದ ಬಂದ ಕಾರು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.