ಕೊರೋನ ಭೀತಿ: ಭಾರತ ಸಹಿತ 14 ದೇಶಗಳ ಪ್ರಯಾಣಿಕರಿಗೆ ನಿರ್ಬಂಧ ಹೇರಿದ ಈ ಗಲ್ಫ್ ರಾಷ್ಟ್ರ

Update: 2020-03-09 06:13 GMT

ದೋಹಾ, ಮಾ.9: ಕೊರೋನ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಭಾರತ ಸಹಿತ 14 ದೇಶಗಳ ಪ್ರಯಾಣಿಕರಿಗೆ ಮಾ.9ರಿಂದ ಅನ್ವಯವಾಗುವಂತೆ ಖತರ್ ತಾತ್ಕಾಲಿಕ ನಿರ್ಬಂಧ ಹೇರಿದೆ.

ಈ ನಿರ್ಬಂಧವು ಭಾರತ, ಚೀನ, ಈಜಿಪ್ಟ್, ಇರಾನ್, ಇರಾಕ್, ಲೆಬನಾನ್, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ, ಫಿಲಿಪೈನ್ಸ್, ದಕ್ಷಿಣ ಕೊರಿಯಾ, ಶ್ರೀಲಂಕಾ, ಸಿರಿಯಾ ಹಾಗೂ ಥಾಯ್ಲಂಡ್ ದೇಶಗಳಿಗೂ ಅನ್ವಯವಾಗುತ್ತದೆ.

ಖತರ್ ಈಗಾಗಲೇ ಇಟೆಲಿ ದೇಶದಿಂದ ಹಾಗೂ ಆ ದೇಶಕ್ಕೆ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿದೆ. ಖತರ್‌ನಲ್ಲಿ ರವಿವಾರ ಮತ್ತೆ ಮೂರು ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 15ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News