ಸಿನೆಮಾ ಮ್ಯೂಝಿಯಂ ಒಂದೇ ಕಡೆ ತರವಲ್ಲ

Update: 2020-03-09 06:54 GMT

ಮಾನ್ಯರೇ,

ಚಲನಚಿತ್ರ ಅಕಾಡಮಿಯು ರಾಜ್ಯದ ಪ್ರಮುಖ ಐದು ಸ್ಥಳಗಳಲ್ಲಿ ಮ್ಯೂಝಿಯಂ ಸ್ಥಾಪಿಸಲು ಮುಂದಾಗಿದೆ. ಇದು ಸ್ವಾಗತಾರ್ಹ ಕ್ರಮವಾಗಿದೆ. ಮೂಕಿ ಚಿತ್ರದಿಂದ ಹಿಡಿದು ಇಂದಿನ ಆಧುನಿಕ ಡಿಜಿಟಲ್ ಚಲನ ಚಿತ್ರ ನಡೆದು ಬಂದ ಹಾದಿಯ ವಿವಿಧ ಮಜಲುಗಳು, ತಂತ್ರಜ್ಞಾನ ಬಳಕೆ, ಬದಲಾವಣೆ ಕುರಿತು ಮಾಹಿತಿ ಒದಗಿಸುವ ಉದ್ದೇಶದಿಂದ ಮ್ಯೂಝಿಯಂ ಸ್ಥಾಪಿಸುತ್ತಿರುವುದು ಸ್ವಾಗತಾರ್ಹ ಕ್ರಮ. ಈ ಮ್ಯೂಝಿಯಂಗಳ ನಿರ್ವಹಣೆ ಸುವ್ಯವಸ್ಥೆ, ಪ್ರವಾಸಿಗರ ಆಕರ್ಷಿಸುವ ಉದ್ದೇಶದಿಂದ ಖಾಸಗಿಯವರಿಗೆ ವಹಿಸುವುದು ಸೂಕ್ತ. ಬಾದಾಮಿ ಹಾಗೂ ಐಹೊಳೆಯಲ್ಲಿ ಮ್ಯೂಝಿಯಂ ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ಇದು ಸರಿಯಾದ ಕ್ರಮವಲ್ಲ. ಬಾದಾಮಿ-ಐಹೊಳೆ ನಡುವಿನ ಅಂತರ ಕೇವಲ. 35 ಕಿ.ಮೀ. ಮಾತ್ರ. ಇಷ್ಟು ಸಣ್ಣ ಅಂತರದಲ್ಲಿ ಎರಡು ಮ್ಯೂಝಿಯಂ ಸ್ಥಾಪನೆ ಮಾಡುವುದು ಸರಿಯಾದ ಕ್ರಮವಲ್ಲ. ರಾಜ್ಯದ ನಾಲ್ಕು ವಿಭಾಗದಲ್ಲೂ ಮ್ಯೂಝಿಯಂ ಸ್ಥಾಪನೆಯಾಗಬೇಕು. ಅಲ್ಲದೆ ಪ್ರವಾಸಿ ಸ್ಥಳಗಳ ಸುತ್ತ ಮುತ್ತ ಇದ್ದರೆ ಹೆಚ್ಚು ಅನುಕೂಲವಾಗುವುದು. ಐದು ಮ್ಯೂಝಿಯಂಗಳನ್ನು ಒಂದೇ ರೀತಿಯಲ್ಲಿ ಅಭಿವೃದ್ಧಿ ಪಡಿಸಿದರೆ ನೋಡುಗರಿಗೂ ಸಮಗ್ರ ಮಾಹಿತಿ ದೊರಕುತ್ತದೆ.

- ಪ್ರಹ್ಲಾದ್ ವಾ ಪತ್ತಾರ ಯಡ್ರಾಮಿ ಕಲಬುರ್ಗಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News