ಕೊರೋನ ವೆರಸ್ ಭೀತಿ: ಭಾರತದ ವಿಶ್ವಕಪ್ ಫುಟ್ಬಾಲ್ ಅರ್ಹತಾ ಪಂದ್ಯ ಮುಂದೂಡಿಕೆ

Update: 2020-03-09 18:41 GMT

ದಿಲ್ಲಿ, ಮಾ.9: ಢಾಕಾದಲ್ಲಿ ಜೂನ್ 4 ರಂದು ಬಾಂಗ್ಲಾದೇಶ ವಿರುದ್ಧ ಮತ್ತು ಜೂನ್ 9 ರಂದು ಕೋಲ್ಕತ್ತಾದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತದ ನಿಗದಿಯಾಗಿರುವ ಫುಟಾಲ್ ಪಂದ್ಯಗಳನ್ನು ಕೊರೋನ ವೈರಸ್ ಕಾರಣದಿಂದಾಗಿ ಮುಂದೂಡಲಾಗಿದೆ.

ಜೂನ್‌ನಲ್ಲಿ ನಡೆಯಲಿರುವ ಏಶ್ಯನ್ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಮುಂದೂಡಲು ಫಿಫಾ ಮತ್ತು ಏಶ್ಯನ್ ಫುಟ್ಬಾಲ್ ಒಕ್ಕೂಟ (ಎಎಫ್ಸಿ) ಸೋಮವಾರ ಒಪ್ಪಿಕೊಂಡಿವೆ.

 ಏಶ್ಯದ ಸದಸ್ಯ ಸಂಘಗಳೊಂದಿಗೆ ಸಮಾಲೋಚಿಸಿದ ನಂತರ, ಫಿಫಾ ಮತ್ತು ಏಶ್ಯನ್ ಫುಟ್ಬಾಲ್ ಕಾನ್ಫೆಡರೇಷನ್ (ಎಎಫ್ಸಿ) ಫಿಫಾ ವಿಶ್ವಕಪ್ ಖತರ್ 2022ರ ಮುಂಬರುವ ಏಶ್ಯನ್ ಅರ್ಹತಾ ಪಂದ್ಯಗಳನ್ನು ಮುಂದೂಡಲು ಒಪ್ಪಿಕೊಂಡಿವೆ ಎಂದು ಫಿಫಾ ಹೇಳಿಕೆಯಲ್ಲಿ ತಿಳಿಸಿದೆ.

  

ತವರಿನಲ್ಲಿ ಮಾಲ್ಡೀವ್ಸ್ ಮತ್ತು ದೂರದಲ್ಲಿರುವ ಚೀನಾದ ಪಂದ್ಯಗಳನ್ನು ಈಗಾಗಲೇ ಥೈಲ್ಯಾಂಡ್‌ನ ಬುರಿರಾಮ್ಗೆ ಸ್ಥಳಾಂತರಿಸಲಾಗಿದೆ. ದಕ್ಷಿಣ ಕೊರಿಯಾ ಮತ್ತು ಚೀನಾ ನಡುವಿನ ಮಹಿಳಾ ಒಲಿಂಪಿಕ್ ಅರ್ಹತಾ ಪ್ಲೇಆಫ್ ಹೊರತುಪಡಿಸಿ, ಒಲಿಂಪಿಕ್ ಫುಟ್ಬಾಲ್ ಪಂದ್ಯಾವಳಿಗಳಿಗೆ ಮುಂಬರುವ ಅರ್ಹತಾ ಪಂದ್ಯಗಳನ್ನು ನಿಗದಿಯಂತೆ ಆಡುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News