×
Ad

ಮನೆಗಳ ತೆರವು ಕ್ರಮ ಖಂಡಿಸಿ ಮಾ.12ರಂದು ಕರವೇ ಪ್ರತಿಭಟನೆ

Update: 2020-03-11 17:29 IST

ಬೆಂಗಳೂರು, ಮಾ.11: ಕೊಳಗೇರಿ ಪ್ರದೇಶದ ಕೆಲ ಮನೆಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ತೆರವುಗೊಳಿಸಿರುವ ಕ್ರಮ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ(ಅ.ಬ) ವತಿಯಿಂದ ಇಂದು(ಮಾ.12) ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 

ಬುಧವಾರ ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವೇದಿಕೆ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸೈಫುಲ್ಲಾ, ಇಲ್ಲಿನ ಚಾಮರಾಜಪೇಟೆಯ ವಾರ್ಡ್ ಸಂಖ್ಯೆ 139ರ ಭಕ್ತಿ ಗಾರ್ಡನ್ ವ್ಯಾಪ್ತಿಯಲ್ಲಿ ಅನುಸೂಚಿತವಲ್ಲದ ಕೊಳಚೆ ಪ್ರದೇಶದಲ್ಲಿ ಸುಮಾರು 45 ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಈ ಜಾಗದಲ್ಲಿರುವ ಒಟ್ಟು ಒಂದು ಸಾವಿರ ಮನೆಗಳ ಪೈಕಿ 7 ಮನೆಗಳನ್ನು ಗುರಿಯಾಗಿಸಿಕೊಂಡು ಸ್ಥಳೀಯ ಅಧಿಕಾರಿಗಳು ತರಾತುರಿಯಲ್ಲಿ ತೆರವುಗೊಳಿಸಿದ್ದಾರೆ. ಇದರ ಪರಿಣಾಮ ನೂರಾರು ಕುಟುಂಬಗಳು ಬೀದಿ ಪಾಲಾಗಿದ್ದು, ಅವರಿಗೆ ನೆಲೆಯೇ ಇಲ್ಲದಂತೆ ಆಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ, ಬಡವರಿಗೆ ಸೂರು ಕಲ್ಪಿಸಬೇಕೆಂದು ಗುರುವಾರ(ಮಾ.12) ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News