ಇಟಲಿಗೆ ವೈದ್ಯಕೀಯ ಸಿಬ್ಬಂದಿ, ಸಲಕರಣೆಗಳನ್ನು ಕಳುಹಿಸಿದ ಚೀನಾ

Update: 2020-03-14 16:59 GMT

ರೋಮ್ (ಇಟಲಿ), ಮಾ. 14: ಕೊರೋನವೈರಸ್ ಸೋಂಕು ಒಡ್ಡಿದ ಅಪಾಯವನ್ನು ಎದುರಿಸುವಲ್ಲಿ ಇಟಲಿಗೆ ನೆರವು ನೀಡುವುದಕ್ಕಾಗಿ ಚೀನಾವು ಒಂದು ವಿಮಾನದಲ್ಲಿ ಮುಖಕವಚಗಳು ಮತ್ತು ಕೃತಕ ಉಸಿರಾಟದ ಸಾಧನಗಳನ್ನು ಆ ದೇಶಕ್ಕೆ ಕಳುಹಿಸಿಕೊಟ್ಟಿದೆ.

ಕೊರೋನವೈರಸ್ ಕಾಯಿಲೆಯು ಕಳೆದ ವರ್ಷದ ಕೊನೆಯಲ್ಲಿ ಚೀನಾದಲ್ಲಿ ಆರಂಭಗೊಂಡಿತು ಹಾಗೂ ಬಳಿಕ ಜಗತ್ತಿನೆಲ್ಲೆಡೆ ಪಸರಿಸಿತು. ಈಗ, ಚೀನಾದ ಬಳಿಕ ಇಟಲಿಯೇ ಕೊರೋನವೈರಸ್‌ನಿಂದ ಅತ್ಯಂತ ಪೀಡಿತ ದೇಶವಾಗಿದೆ. ಇಟಲಿಯಲ್ಲಿ ಈವರೆಗೆ 1,016 ಮಂದಿ ಮೃತಪಟ್ಟಿದ್ದಾರೆ ಹಾಗೂ 15,113 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಚೀನಾದ ಒಂಬತ್ತು ವೈದ್ಯಕೀಯ ಸಿಬ್ಬಂದಿಯ ತಂಡವು ಸುಮಾರು 30 ಟನ್ ಪರಿಕರಗಳೊಂದಿಗೆ ಗುರುವಾರ ತಡರಾತ್ರಿ ರೋಮ್‌ಗೆ ಆಗಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News