ಬಂದ್‌ನಿಂದ ಬಡವರ ಜೀವನಕ್ಕೆ ತೊಂದರೆ: ವಾಟಾಳ್ ನಾಗರಾಜ್

Update: 2020-03-15 13:16 GMT

ಬೆಂಗಳೂರು, ಮಾ.15: ಇಡೀ ವಾರ ಕರ್ನಾಟಕ ಬಂದ್ ಮಾಡುವದರಿಂದ ಬಡವರ ಜೀವನಕ್ಕೆ ತೊಂದರೆಯಾಗುತ್ತೆ. ಆಟೋ, ಕ್ಯಾಬ್ ಸೇರಿದಂತೆ ಮಧ್ಯಮ ವರ್ಗದ ವ್ಯಾಪಾರಿಗಳಿಗೆ ಕಷ್ಟ ಉಂಟಾಗಿದೆ. ಇದನ್ನ ರಾಜ್ಯ ಸರಕಾರ ಅರಿತುಕೊಳ್ಳಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ಗಂಭೀರವಾಗಿ ತೀವ್ರವಾಗಿ ಹರಡುವ ರೋಗ. ಆದರೆ, ಈ ರೋಗಕ್ಕೆ ಜನ ಹೆದರುವ ಅವಶ್ಯಕತೆ ಇಲ್ಲ. ಎಲ್ಲಾ ಕಡೆ ಶುಚಿತ್ವ ಕಾಪಾಡಿ, ಶುಚಿಯಿದ್ದ ಕಡೆ ರೋಗ ಬರೋದಿಲ್ಲ. ಬಂದ್ ಮಾಡುವದರಿಂದ ಬಹಳ ಜನರಿಗೆ ತೊಂದರೆಯಾಗುತ್ತೆದೆ ಎಂದು ಹೇಳಿದರು.

ಅಲ್ಲದೇ ಅಖಂಡ ಕರ್ನಾಟಕದ ಗಡಿ ಭಾಗವನ್ನು ಸಂಪೂರ್ಣ ಬಂದ್ ಮಾಡಿ ಎಚ್ಚರವಹಿಸಬೇಕು. ಕಲಬುರಗಿಯಲ್ಲಿ ಆಗಿರುವ ಘಟನೆ ಬೇಜಾವಾಬ್ದಾರಿಯಿಂದ ಆಗಿದೆ. ಮೊದಲೇ ಎಚ್ಚರ ವಹಿಸಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಚಿಕಿತ್ಸೆಗೆ ಹೆಚ್ಚು ಆಸ್ಪತ್ರೆಗಳನ್ನ ತೆರೆಯಬೇಕು, ಖಾಸಗಿ ಆಸ್ಪತ್ರೆಯವರೂ ಕೈ ಜೊಡಿಸಬೇಕು. ಮಾಸ್ಕ್‌ಗಳನ್ನ ಸರಕಾರವೇ ಉಚಿತವಾಗಿ ಎಲ್ಲರಿಗೂ ಹಂಚಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News