×
Ad

ಮಾಸ್ಕ್, ಸ್ಯಾನಿಟೈಜರ್ ದುಪ್ಪಟ್ಟು ಬೆಲೆಗೆ ಮಾರಾಟ: ಸಿಸಿಬಿ ಪೊಲೀಸರಿಂದ ದಾಳಿ

Update: 2020-03-15 19:08 IST

ಬೆಂಗಳೂರು, ಮಾ.15: ಕೊರೋನಾ ಸೋಂಕು ಹರಡುವ ಭೀತಿ ಸಿಲುಕಿರುವ ಸಾರ್ವಜನಿಕರನ್ನು ಬಂಡವಾಳ ಮಾಡಿಕೊಂಡು, ಮಾಸ್ಕ್ ಮತ್ತು ಸ್ಯಾನಿಟೈಜರ್ ಬೆಲೆ ಏರಿಕೆ ಮಾಡಿರುವ ಮೆಡಿಕಲ್ ಶಾಪ್‌ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಕೊರೋನಾ ಭೀತಿ ಹೆಚ್ಚಾಗುತ್ತಿದ್ದಂತೆ ಕೃತಕ ಅಭಾವವನ್ನು ಸೃಷ್ಟಿಸಿ, ಮಾಸ್ಕ್ ಮತ್ತು ಸ್ಯಾನಿಟೈಜರ್ ಬೆಲೆಯನ್ನು ಒಂದಕ್ಕೆ ಐದರಿಂದ ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದ ದೂರುಗಳು ಬಂದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ನಗರದ ಹಲವು ಮೆಡಿಕಲ್ ಶಾಪ್‌ಗಳ ಮೇಲೆ ದಾಳಿ ನಡೆಸಿದ್ದಾರೆ.

ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಮೆಡಿಕಲ್ ಶಾಪ್‌ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ದುಬಾರಿ ಬೆಲೆಗೆ ಸ್ಯಾನಿಟೈಜರ್ ಮತ್ತು ಮಾಸ್ಕ್ ಮಾರುತ್ತಿದ್ದ ಐವರು ಮೆಡಿಕಲ್ ಶಾಪ್ ಮಾಲೀಕರು ಸೆರೆಸಿಕ್ಕಿದ್ದಾರೆ. ಜಯನಗರ, ಕಲಾಸಿಪಾಳ್ಯ, ಮಹಾಲಕ್ಷ್ಮಿ ಲೇಔಟ್, ಸಂಜಯ ನಗರ ಮುಂತಾದ ಕಡೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News