ಶಾಲೆಗಳು ಮುಚ್ಚಿದಾಗ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಹೇಗೆ ನೀಡುತ್ತೀರಿ ?: ರಾಜ್ಯ ಸರಕಾರಗಳನ್ನು ಕೇಳಿದ ಸುಪ್ರೀಂ

Update: 2020-03-18 07:51 GMT

ಹೊಸದಿಲ್ಲಿ, ಮಾ.18: ಕೊರೋನವೈರಸ್ ಸೋಂಕು ಹರಡುತ್ತಿರುವುದನ್ನು ತಡೆಯುವ ಉದ್ದೇಶಕ್ಕಾಗಿ ದೇಶಾದ್ಯಂತ ಶಾಲೆಗಳು ಮುಚ್ಚಲ್ಪಟ್ಟ ಕಾರಣ ಮಕ್ಕಳಿಗೆ ಮಧ್ಯಾಹ್ನದ  ಬಿಸಿಯೂಟ ಲಭ್ಯವಿಲ್ಲದಿರುವ ವಿಚಾರವನ್ನು ಗಮನಿಸಿರುವ ಸುಪ್ರೀಂ ಕೋರ್ಟ್ ಈ ಬಗ್ಗೆ ರಾಜ್ಯ ಸರಕಾರಗಳಿಂದ ಸ್ಪಷ್ಟನೆ ಬಯಸಿದೆ.

ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಬುಧವಾರ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿಗೊಳಿಸಿದ್ದು, ಶಾಲೆಗಳು ಮುಚ್ಚಲ್ಪಟ್ಟಿರುವುದರಿಂದ ಮಕ್ಕಳಿಗೆ ಹೇಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ ಎಂದು ಕೇಳಿದೆ.

ಕೊರೋನವೈರಸ್ ಸೋಂಕು ಪ್ರಕರಣಗಳು ಭಾರತದಲ್ಲಿ ಕಂಡು ಬಂದ ಬಳಿಕ ದೇಶದ ಹೆಚ್ಚಿನ ಭಾಗಗಳಲ್ಲಿನ ಶಾಲೆಗಳನ್ನು ಈ ತಿಂಗಳು ತಾತ್ಕಾಲಿಕವಾಗಿ ಮುಚ್ಚಲಾಯಿದೆ. 

ಕೇರಳದಲ್ಲಿ ರಾಜ್ಯ ಸರ್ಕಾರವು ಮಕ್ಕಳಿಗೆ ಮಧ್ಯಾಹ್ನದ  ಊಟವನ್ನು ಮನೆಗಳಿಗೆ ಉಚಿತವಾಗಿ ತಲುಪಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News