ಅಮೆರಿಕದ ಪತ್ರಕರ್ತರಿಗೆ ದೇಶ ತೊರೆಯಲು ಆದೇಶ ನೀಡಿದ ಚೀನಾ

Update: 2020-03-18 18:34 GMT

ಬೀಜಿಂಗ್ (ಚೀನಾ), ಮಾ. 18: ಅಮೆರಿಕದ ಪತ್ರಿಕೆಗಳಾದ ನ್ಯೂಯಾರ್ಕ್ ಟೈಮ್ಸ್, ವಾಶಿಂಗ್ಟನ್ ಪೋಸ್ಟ್ ಮತ್ತು ವಾಲ್ ಸ್ಟ್ರೀಟ್ ಜರ್ನಲ್‌ಗಳ ಪತ್ರಕರ್ತರು ದೇಶ ತೊರೆಯುವಂತೆ ಚೀನಾ ಬುಧವಾರ ಆದೇಶ ನೀಡಿದೆ. ಇದು ಚೀನಾದ ಕಮ್ಯುನಿಸ್ಟ್ ಸರಕಾರವು ಈಚಿನ ದಿನಗಳಲ್ಲಿ ವಿದೇಶಿ ಪತ್ರಿಕೆಗಳ ವಿರುದ್ಧ ತೆಗೆದುಕೊಂಡಿರುವ ಅತ್ಯಂತ ಕಠಿಣ ಕ್ರಮವಾಗಿದೆ.

ಚೀನಾದ ಸರಕಾರಿ ಒಡೆತನದ ಮಾಧ್ಯಮಗಳಿಗಾಗಿ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಚೀನಿ ರಾಷ್ಟ್ರೀಯರ ಸಂಖ್ಯೆಯನ್ನು ಅಮೆರಿಕ ಕಡಿತ ಮಾಡಿರುವುದಕ್ಕೆ ಪ್ರತಿಯಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಚೀನಾದ ವಿದೇಶ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ಪತ್ರಕರ್ತರು ಬುಧವಾರದಿಂದ ನಾಲ್ಕು ದಿನಗಳ ಒಳಗೆ ವಿದೇಶ ಸಚಿವಾಲಯಕ್ಕೆ ಸೂಚನೆ ನೀಡಬೇಕು ಹಾಗೂ 10 ದಿನಗಳೊಳಗೆ ತಮ್ಮ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು ಎಂದು ಸಚಿವಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News