ಕೊರೋನಾ ಭೀತಿ: ನಿರ್ಬಂಧ ವಿಧಿಸಲು ಚೀನಾದಂತಹ ಮಿಲಿಟರಿ ವ್ಯವಸ್ಥೆ ಭಾರತದಲ್ಲಿಲ್ಲ; ಕೇಂದ್ರ ಸಚಿವ ಕಿಶನ್ ರೆಡ್ಡಿ

Update: 2020-03-20 12:59 GMT

ಹೊಸದಿಲ್ಲಿ: ಜನರು ಸಾಮಾಜಿಕವಾಗಿ ಅಂತರ ಕಾಪಾಡಿಕೊಳ್ಳುವಂತೆ ಬಲವಂತಪಡಿಸುವ `ಮಿಲಿಟರಿ ವ್ಯವಸ್ಥೆ' ಚೀನಾದಲ್ಲಿರುವುದರಿಂದ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಭಾರತ  ನಡೆಸುತ್ತಿರುವ ಪ್ರಯತ್ನವನ್ನು ಚೀನಾದ ಜತೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಹಾಯಕ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ.

"ನಾವು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದೇವೆ. ನಾವು ಈ ಸೋಂಕನ್ನು ತಡೆಯಬೇಕಿದೆ.  ಇದಕ್ಕೆ ಈಗ ಇರುವ ಏಕೈಕ ಔಷಧಿ 'ಸಾಮಾಜಿಕ ಅಂತರ' ಹಾಗೂ ಅಗತ್ಯ  ಮುನ್ನೆಚ್ಚರಿಕಾ ಕ್ರಮಗಳು'' ಎಂದು ಸಚಿವರು ಸುದ್ದಿಗಾರರ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಚೀನಾ ತನ್ನ ಮಿಲಿಟರಿ ವ್ಯವಸ್ಥೆಯಿಂದಾಗಿ ಈ ರೋಗ ಹರಡುವಿಕೆಯನ್ನು ತಡೆಗಟ್ಟಲು ಯಶಸ್ವಿಯಾಗಲು ಸ್ವಲ್ಪ ಮಟ್ಟಿಗೆ ಕಾರಣ. ಚೀನಾ ವರದಿ ಮಾಡಬಾರದು ಎಂದರೆ ಮಾಧ್ಯಮದಲ್ಲಿ ವರದಿಯಾಗುವುದಿಲ್ಲ, ಕಚೇರಿಗೆ ತೆರಳಬೇಡಿ ಎಂದರೆ ಯಾರೂ ತೆರಳುವುದಿಲ್ಲ, ಮನೆಯಲ್ಲಿಯೇ ಇರಿ ಎಂದರೆ ಎಲ್ಲರೂ ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದರೆ ಭಾರತದ ಪರಿಸ್ಥಿತಿ ಭಿನ್ನವಾಗಿದೆ. ಆದುದರಿಂದ ಇಲ್ಲಿನ ಸರಕಾರ ಈ ರೋಗ ನಿಯಂತ್ರಣಕ್ಕೆ ಸಾರ್ವಜನಿಕರ ಸಹಭಾಗಿತ್ವವನ್ನು ಕೋರಿದೆ'' ಎಂದರು.

"ಅನಗತ್ಯ ಟೀಕೆ ಮಾಡದೆ ಎಲ್ಲಾ ಪಕ್ಷಗಳು ಒಗ್ಗೂಡಿ ಕೆಲಸ ಮಾಡಬೇಕು. ನಮ್ಮ ಜನರನ್ನು ರಕ್ಷಿಸಲು ನಾವು ಜತೆಯಾಗಿ ಹೋರಾಡಬೇಕು, ಭಾರತ ಈ ಸೋಂಕು ಹತ್ತಿಕ್ಕಲು ಅತ್ಯುತ್ತಮ ಕ್ರಮಗಳನ್ನು ಕೈಗೊಳ್ಳುತ್ತಿದೆ'' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News