ವಿಶ್ವ ಸ್ನೂಕರ್ ಸ್ನೂಕರ್ ಚಾಂಪಿಯನ್‌ಶಿಪ್ ಮುಂದೂಡಿಕೆ

Update: 2020-03-20 17:22 GMT

ಲಂಡನ್, ಮಾ.20: ಶೆಫೀಲ್ಡ್‌ನಲ್ಲಿ ನಡೆಯಬೇಕಾಗಿದ್ದ ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್‌ನ್ನು ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.

ಕ್ರೂಸಿಬ್ಲೆ ಥಿಯೇಟರ್‌ನಲ್ಲಿ ಎಪ್ರಿಲ್ 18ರಿಂದ ಮೇ 4ರ ತನಕ 17 ದಿನಗಳ ಕಾಲ ನಿಗದಿಯಾಗಿದ್ದ ಟೂರ್ನಿಯನ್ನು ಜುಲೈ ಅಥವಾ ಆಗಸ್ಟ್‌ನಲ್ಲಿ ಮರು ಆಯೋಜಿಸುವ ಸಾಧ್ಯತೆಯಿದೆ ಎಂದು ವಿಶ್ವ ವೃತ್ತಿಪರ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಸಂಘಟನೆ ತಿಳಿಸಿದೆ.

ಇದು ಪ್ರತಿಯೊಬ್ಬರಿಗೂ ಕಠಿಣ ಸಮಯ. ಆದರೆ, ಇದರಿಂದ ಪಾರಾಗಲು ನಾವೆಲ್ಲರೂ ಬದ್ಧರಾಗಿದ್ದೇವೆ.ವಿಶ್ವದೆಲ್ಲೆಡೆ ಇರುವ ಅಭಿಮಾನಿಗಳು ಹಾಗೂ ಚಾಂಪಿಯನ್‌ಶಿಪ್‌ನಲ್ಲಿ ಭಾಗಿಯಾಗಲಿರುವ 144 ಆಟಗಾರರು ವಿಶ್ವ ಚಾಂಪಿಯನ್‌ಶಿಪ್ ಯಾವಾಗ ಆರಂಭವಾಗಲಿದೆ ಎಂಬ ಕಾತರದಲ್ಲಿದ್ದಾರೆ. ನಾವು ನಮ್ಮೆಲ್ಲಾ ಪ್ರಸಾರ ಸಂಸ್ಥೆಯ ಜೊತೆಗೆ ಟೂರ್ನಿಯನ್ನು ಸಂಘಟಿಸುತ್ತೇವೆ ಎಂದು ದೃಢಪಡಿಸುವೆ. ಆದಷ್ಟು ಬೇಗನೆ ಹೊಸ ದಿನಾಂಕವನ್ನು ಖಚಿತಪಡಿಸುತ್ತೇನೆ ಎಂದು ವಿಶ್ವ ವೃತ್ತಿಪರ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಸಂಸ್ಥೆಯ ಅಧ್ಯಕ್ಷ ಬಾರ್ರಿ ಹೀರ್ನ್ ಹೇಳಿದ್ದಾರೆ.

ಸ್ನೂಕರ್ ವಿಶ್ವ ಚಾಂಪಿಯನ್‌ಶಿಪ್ ಭಾರೀ ಪ್ರೇಕ್ಷಕರನ್ನು ಸೆಳೆಯುವ ಜತೆಗೆ ದೂರದರ್ಶನದಲ್ಲೂ ಭಾರೀ ವೀಕ್ಷಕರನ್ನು ಹೊಂದಿದೆ. ಅತ್ಯಂತ ಮುಖ್ಯವಾಗಿ ಹಳೆಯ ವೀಕ್ಷಕರ ಮೂಲಕ ಇದು ಖ್ಯಾತಿ ಪಡೆದಿದೆ.ಕೊರೋನ ವೈರಸ್ ಭೀತಿಯ ಕಾರಣಕ್ಕೆ ಸಾವಿರಾರು ಜನರಿಗೆ ಮನೆಯಲ್ಲೇ ಉಳಿದುಕೊಳ್ಳುವಂತೆ ಸಲಹೆ ನೀಡಲಾಗಿದೆ.

ಅತ್ಯಂತ ಹಿರಿದಾದ ಕ್ರೀಡಾ ಸ್ಪರ್ಧೆಯ ನೇರ ಟಿವಿ ಪ್ರಸಾರವು ವಿಶ್ವದೆಲ್ಲೆಯ ಜನರಿಗೆ ಸ್ಫೂರ್ತಿಯಾಗಲಿದ್ದು, ಈ ಸವಾಲಿನ ಸಮಯದಲ್ಲಿ ನಮ್ಮ ಟೂರ್ನಿಗಾಗಿ ಪರಿಹಾರ ಕಂಡುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಕೆಲವು ಸ್ಪರ್ಧೆಗಳನ್ನು ಖಾಲಿ ಸ್ಟೇಡಿಯಂನಲ್ಲಿ ನಡೆಸುವ ಬಗ್ಗೆಯೂ ಚಿಂತಿಸಲಾಗುತ್ತಿದೆ ಎಂದು ಹೀರ್ನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News