ಕೋವಿಡ್-19: ಭಾರತೀಯರಲ್ಲಿ ಜಾಗೃತಿ ಮೂಡಿಸಲು ಹಿಂದಿಯಲ್ಲಿ ಟ್ವೀಟ್ ಮಾಡಿದ ಪೀಟರ್ಸನ್

Update: 2020-03-20 17:33 GMT

ಹೊಸದಿಲ್ಲಿ, ಮಾ.20: ಹಿಂದಿ ಭಾಷೆಯಲ್ಲಿ ವಿಶೇಷ ಸಂದೇಶವನ್ನು ಕಳುಹಿಸಿರುವ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್, ಸರಕಾರದ ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ಒಂದು ಪಿಡುಗಾಗಿ ಪರಿಣಮಿಸಿರುವ ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಬೇಕೆಂದು ಭಾರತೀಯ ನಾಗರಿಕರಲ್ಲಿ ವಿನಂತಿಸಿದ್ದಾರೆ.

ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಪೀಟರ್ಸನ್,‘‘ನಮಸ್ತೆ ಇಂಡಿಯಾ, ಹಮ್ ಸಬ್ ಕೊರೋನವೈರಸ್ ಕೊ ಹರಾನೆ ಮೇ ಏಕ್ ಸಾಥ್ ಹೈ, ಹಮ್ ಸಬ್ ಅಪ್ನೆ ಅಪ್ನೆ ಸರ್ಕಾರ್ ಕಿ ಬಾತ್ ಕಾ ಪಾಲನ್ ಕರೆ ಔರ್ ಘರ್ ಮೆ ಕುಚ್ ದಿನೊ ಕೇ ಲಿಯೇ ರಹೆ, ಯಹ ಸಮಯ್ ಹೈ ಹೋಷಿಯಾರ್ ರಹನೆ ಕಾ. ಆಪ್ ಸಭೀ ಕೊ ದೇಡ್ ಸಾರಾ ಪ್ಯಾರ್’’(ನಮಸ್ತೆ ಭಾರತ, ಕೊರೋನ ವೈರಸ್ ವಿರುದ್ಧ ಹೋರಾಟದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದಾರೆ ಹಾಗೂ ಪ್ರತಿಯೊಬ್ಬರೂ ಸರಕಾರದ ಸೂಚನೆಯನ್ನು ಆಲಿಸಲೇಬೇಕು. ಕೆಲವು ಸಮಯ ಮನೆಯಲ್ಲೇ ಇರಿ. ಸ್ಮಾರ್ಟ್ ಆಗಲು ಇದೊಂದು ಉತ್ತಮ ಅವಕಾಶ. ನಿಮಗೆಲ್ಲರೂ ಪ್ರೀತಿ ತುಂಬಿದ ವಂದನೆಗಳು)

ಹಿಂದಿಯಲ್ಲಿ ಸಂದೇಶ ಕಳುಹಿಸಲು ಭಾರತದ ಕ್ರಿಕೆಟಿಗ ಶ್ರೀವಾಸ್ತವ ಗೋಸ್ವಾಮಿ ಸಹಾಯ ಮಾಡಿದ್ದಾರೆ ಎಂದು ಪೀಟರ್ಸನ್ ಬಹಿರಂಗಪಡಿಸಿದರು. 39ರ ಹರೆಯದ ಪೀಟರ್ಸನ್ ಗೋಸ್ವಾಮಿಯ ಜತೆ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ತಂಡದ ಪರ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News