ಕೊರೋನಾ ಕುರಿತ ಪ್ರಶ್ನೆಗಳಿಗೆ ಉತ್ತರಿಸಲಿದೆ ವಿಶ್ವ ಆರೋಗ್ಯ ಸಂಸ್ಥೆ: ಈ ನಂಬರ್ ಗೆ ವಾಟ್ಸ್ಯಾಪ್ ಮಾಡಿ

Update: 2020-03-21 09:29 GMT

ಹೊಸದಿಲ್ಲಿ: ವಾಟ್ಸ್ಯಾಪ್ ನಲ್ಲಿ ಕೊರೋನಾವೈರಸ್ ಕುರಿತಂತೆ ಮಾಹಿತಿ ನೀಡುವ ಹೆಲ್ತ್ ಅಲರ್ಟ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ ಶನಿವಾರ ಆರಂಭಿಸಿದೆ. ಈ ಮೂಲಕ ವಿಶ್ವದಾದ್ಯಂತ 150 ಕೋಟಿಗೂ ಅಧಿಕ ಬಳಕೆದಾರರು ಕೋವಿಡ್-19 ಕುರಿತಾದ ಪ್ರಶ್ನೆಗಳನ್ನು ಕೇಳಿ ಅದರ ಕುರಿತಂತೆ ಸೂಕ್ತ ಉತ್ತರ ಹಾಗೂ ನಂಬಲರ್ಹ ಮಾಹಿತಿ ಪಡೆಯಬಹುದಾಗಿದೆ.

ಈ ಡಬ್ಲ್ಯುಎಚ್‍ಒ ಹೆಲ್ತ್ ಅಲರ್ಟ್ ವಾಟ್ಸ್ಯಾಪ್ ಸಂಖ್ಯೆ +41 79 893 18 92 ಆಗಿದ್ದು, ಕೊರೋನ ವೈರಸ್ ಪ್ರಕರಣಗಳ ಲೇಟೆಸ್ಟ್ ಸಂಖ್ಯೆ ಮತ್ತಿತರ ಮಾಹಿತಿಯನ್ನು ಅದು ಒದಗಿಸಲಿದೆ. ಈ ಸಂಖ್ಯೆಯನ್ನು ಬಳೆದಾರರು ತಮ್ಮ ಕಾಂಟ್ಯಾಕ್ಟ್ ಲಿಸ್ಟ್‍ ನಲ್ಲಿ ಸೇವ್ ಮಾಡಿಕೊಂಡ ನಂತರ 'ಹಾಯ್' ಎಂಬ ಸಂದೇಶ ಕಳುಹಿಸಬೇಕು.

ಹಲವಾರು ಪ್ರಶ್ನೆಗಳಿಗೆ ಉತ್ತರಿಸುವ ಜತೆಗೆ ಪ್ರತಿದಿನದ ಮಾಹಿತಿಯನ್ನು ಅದು ಒದಗಿಸಲಿದೆ. ಸೋಂಕಿನಿಂದ ರಕ್ಷಿಸುವ ಬಗೆ ಹಾಗೂ ಕೊರೋನ ಸೋಂಕಿನ ಕುರಿತ ತಪ್ಪು ತಿಳುವಳಿಕೆಗಳನ್ನು ಅದು ದೂರ ಮಾಡಲಿದೆ.

ಆರಂಭದಲ್ಲಿ ಇಂಗ್ಲಿಷಿನಲ್ಲಿ ಲಭ್ಯವಿರುವ ಈ ಸೇವೆ ಮುಂದೆ  ಅರಬಿಕ್, ಚೀನೀ, ಫ್ರೆಂಚ್, ರಷ್ಯನ್ ಹಾಗೂ ಸ್ಪ್ಯಾನಿಶ್ ಭಾಷೆಗಳಲ್ಲೂ ಲಭ್ಯವಾಗಲಿದೆ.

ವಾಟ್ಸ್ಯಾಪ್ ಸಂಸ್ಥೆ ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ಹಾಗೂ ಯುಎನ್‍ಡಿಪಿ ಸಹಯೋಗದೊಂದಿಗೆ ವಾಟ್ಸ್ಯಾಪ್ ಕೊರೋನ ವೈರಸ್ ಇನ್ಫಾರ್ಮೇಶನ್ ಹಬ್ ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News