13ನೇ ಆವೃತ್ತಿಯ ಐಪಿಎಲ್: ಬಿಸಿಸಿಐ, ಫ್ರಾಂಚೈಸಿಗಳಿಂದ ಅಂತಿಮ ನಿರ್ಧಾರ

Update: 2020-03-22 04:51 GMT

ಮುಂಬೈ, ಮಾ.22: ಈ ವರ್ಷದ ಹದಿಮೂರನೇ ಆವೃತ್ತಿಯ ಐಪಿಎಲ್ ಟೂರ್ನಿಯು ನಡೆಸುವ ಕುರಿತಂತೆ ಅಂತಿಮ ನಿರ್ಧಾರ ಕೈಗೊಳ್ಳಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹಾಗೂ ಫ್ರಾಂಚೈಸಿಗಳು ಕಾನ್ಫರೆನ್ಸ್ ಫೋನ್ ಕಾಲ್ ನಡೆಸಲಿವೆ.

‘‘ಐಪಿಎಲ್ 2020ರ ಮುಂದಿನ ಹಾದಿಯ ಕುರಿತಂತೆ ಚರ್ಚಿಸಲು ಮಂಗಳವಾರದಂದು ಬಿಸಿಸಿಐ ಹಾಗೂ ಐಪಿಎಲ್ ಫ್ರಾಂಚೈಸಿಗಳು ಕಾನ್ಫರೆನ್ಸ್ ಫೋನ್ ಕಾಲ್ ನಡೆಸಲಿವೆ’’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಕೋವಿಡ್-19 ವೈರಸ್ ಹಬ್ಬುವ ಭೀತಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನ್ನು(ಐಪಿಎಲ್)ಎಪ್ರಿಲ್ 15ರ ತನಕ ಮುಂದೂಡಲು ಮಾ.13ರಂದು ಬಿಸಿಸಿಐ ನಿರ್ಧರಿಸಿತ್ತು. ದೇಶದಲ್ಲಿ ಕೊರೋನ ವೈರಸ್ ಕಬಂಧಬಾಹು ಚಾಚುತ್ತಿರುವ ಹಿನ್ನೆಲೆಯಲ್ಲಿ ತನ್ನೆಲ್ಲಾ ಉದ್ಯೋಗಿಗಳಿಗೆ ಮನೆಯಲ್ಲಿ ಕುಳಿತು ಕೆಲಸ ಮಾಡುವಂತೆ ಬಿಸಿಸಿಐ ತಿಳಿಸಿತ್ತು.

‘‘ಬಿಸಿಸಿಐ ಕಚೇರಿ ಬಂದ್ ಆಗಿದೆ. ಹೊಟೇಲ್‌ನಲ್ಲಿ ಸಭೆ ನಡೆಸುವಂತಿಲ್ಲ. ಹೀಗಾಗಿ ಕಾನ್ಫರೆನ್ಸ್ ಫೋನ್ ಕಾಲ್ ಆಯ್ಕೆ ಮಾಡಿಕೊಳ್ಳಲಾಗಿದೆ’’ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News