ಕೊಹ್ಲಿ ನನ್ನ ನೆಚ್ಚಿನ ಭಾರತೀಯ ಕ್ರಿಕೆಟಿಗ: ಮಿಯಾಂದಾದ್

Update: 2020-03-22 04:53 GMT

ಕರಾಚಿ, ಮಾ.22: ವಿರಾಟ್ ಕೊಹ್ಲಿಯವರ ಬ್ಯಾಟಿಂಗ್ ವಿಸ್ಮಯಕ್ಕೆ ಮಾರುಹೋಗಿರುವ ಪಾಕಿಸ್ತಾನದ ಕ್ರಿಕೆಟ್ ದಂತಕತೆ ಜಾವೆದ್ ಮಿಯಾಂದಾದ್, ಭಾರತದ ಕ್ರಿಕೆಟ್ ತಂಡದ ನಾಯಕನನ್ನು ತನ್ನ ನೆಚ್ಚಿನ ಬ್ಯಾಟ್ಸ್‌ಮನ್‌ಆಗಿ ಆಯ್ಕೆ ಮಾಡಿದ್ದಾರೆ. ಕೊಹ್ಲಿಯವರ ದಾಖಲೆ ಎಲ್ಲವನ್ನೂ ಹೇಳುತ್ತದೆ ಎಂದಿದ್ದಾರೆ.

‘‘ಕೊಹ್ಲಿ ಅವರ ಕ್ಲಾಸಿಕ್ ಬ್ಯಾಟಿಂಗ್ ನನಗೆ ತುಂಬಾ ಅಚ್ಚುಮೆಚ್ಚು. ಭಾರತೀಯ ಕ್ರಿಕೆಟ್ ತಂಡದಲ್ಲಿ ಯಾರು ಶ್ರೇಷ್ಠರು ಎಂದು ನನ್ನ ಬಳಿ ಕೇಳಿದರೆ ನಾನು ವಿರಾಟ್ ಕೊಹ್ಲಿ ಅವರನ್ನೇ ಆಯ್ಕೆ ಮಾಡುವೆ. ನಾನು ಅವರ ಬಗ್ಗೆ ಹೆಚ್ಚೇನು ಹೇಳುವ ಅಗತ್ಯವಿಲ್ಲ. ಅವರ ದಾಖಲೆಯೇ ಎಲ್ಲವನ್ನೂ ಹೇಳುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅಲ್ಲಿ ಅವರು ಶತಕವನ್ನು ಸಿಡಿಸಿದ್ದರು. ಅವರು ವೇಗದ ಬೌಲರ್‌ಗಳಿಗೆ ಹೆದರುತ್ತಾರೆ ಅಥವಾ ಬೌನ್ಸಿ ಪಿಚ್‌ನಲ್ಲಿ ಆಡುವುದಿಲ್ಲ ಅಥವಾ ಸ್ಪಿನ್ನರ್‌ಗಳೆದರು ಚೆನ್ನಾಗಿ ಆಡುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ’’ ಎಂದು ತನ್ನ ಯೂ ಟ್ಯೂಬ್ ಚಾನೆಲ್‌ನಲ್ಲಿ ಮಿಯಾಂದಾದ್ ಹೇಳಿದ್ದಾರೆ.

ಮಿಯಾಂದಾದ್ ಪಾಕಿಸ್ತಾನದ ಪರ 124 ಟೆಸ್ಟ್‌ನಲ್ಲಿ 8,832 ರನ್ ಹಾಗೂ 233 ಏಕದಿನ ಪಂದ್ಯಗಳಲ್ಲಿ 7,381 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News