ಕೊರೋನ ಭೀತಿಯ ನಡುವೆ ಚೀನಾದಲ್ಲಿ ಹಂಟಾ ವೈರಸ್‍ ಗೆ ವ್ಯಕ್ತಿ ಬಲಿ

Update: 2020-03-24 09:03 GMT

ಬೀಜಿಂಗ್: ಚೀನಾದ ಯುನ್ನಾನ್ ಪ್ರಾಂತ್ಯದ ವ್ಯಕ್ತಿಯೊಬ್ಬ ಸೋಮವಾರ ಹಂಟಾ ವೈರಸ್ ಸೋಂಕಿಗೆ ಬಲಿಯಾಗಿದ್ದಾನೆ. ಚಾರ್ಟರ್ಡ್ ಬಸ್ಸಿನಲ್ಲಿ ಶಾಂಡೊಂಗ್ ಪ್ರಾಂತ್ಯಕ್ಕೆ ವಾಪಸಾಗುತ್ತಿದ್ದ ವೇಳೆ ಆತ ಮೃತಪಟ್ಟಿದ್ದಾನೆಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಆತನ ಜತೆಗಿದ್ದ 32 ಮಂದಿ ಇತರರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ.

ಈ ಸುದ್ದಿ ಹರಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಹಂಟಾ ವೈರಸ್  ಟ್ರೆಂಡಿಂಗ್ ಆಗಿತ್ತಲ್ಲದೆ ಇದು ಕೋವಿಡ್-19 ರೀತಿಯ ಇನ್ನೊಂದು ವೈರಸ್ ಆಗಿರಬಹುದೆಂಬ ವದಂತಿಯೂ ಹಬ್ಬಿದೆ. ಆದರೆ ವಾಸ್ತವವಾಗಿ ಇದು ಇಲಿಗಳ ಮೂಲಕ ಹರಡುವ ವೈರಾಣುವಾಗಿದೆ. ಮನೆಯಲ್ಲಿ ಅಥವಾ ಮನೆಯ ಸುತ್ತಮುತ್ತ ಸೋಂಕು ಪೀಡಿತ ಇಲಿಗಳಿದ್ದರೆ ಈ ಹಂಟಾ ವೈರಸ್ ಸೋಂಕು ಆರೋಗ್ಯವಂತ ಮನುಷ್ಯರಿಗೂ ತಗಲಬಹುದಾಗಿದೆ.  ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲವಾದರೂ ಇಲಿಯ ಮಲ, ಮೂತ್ರ ಇತ್ಯಾದಿಗಳನ್ನು ಮುಟ್ಟಿ ನಂತರ ಕಣ್ಣು, ಮೂಗು, ಬಾಯಿ ಮುಟ್ಟಿದರೆ ಈ ಸೋಂಕು ತಗಲಬಹುದು.

ಜ್ವರ, ತಲೆನೋವು, ಸ್ನಾಯು ನೋವು, ಹೊಟ್ಟೆ ನೋವು, ಚಳಿ, ಹೊಟ್ಟೆಯ ಸಮಸ್ಯೆ, ವಾಂತಿ ಬೇಧಿ ಈ ಸೋಂಕಿನ ಲಕ್ಷಣಗಳಾಗಿವೆ. ಸೋಂಕು ತೀವ್ರಗೊಂಡಲ್ಲಿ ಶ್ವಾಸಕೋಶದಲ್ಲಿ  ದ್ರವ ತುಂಬಿ ಉಸಿರಾಟದ ಸಮಸ್ಯೆ ಕಾಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News