ಪಂಜಾಬ್‌ನಲ್ಲಿ ಕೊರೋನ ಸೋಂಕಿತ ವ್ಯಕ್ತಿ ಸಾವು; 15 ಹಳ್ಳಿಗಳು ಬಂದ್

Update: 2020-03-27 17:52 GMT

ಚಂಡೀಗಡ, ಮಾ.27: ಪಂಜಾಬ್‌ನಲ್ಲಿ ಕೊರೋನ ವೈರಸ್ ಸೋಂಕಿನಿಂದ ಮಾರ್ಚ್ 18 ರಂದು ಮೃತಪಟ್ಟ ಪಂಜಾಬ್‌ನ ವ್ಯಕ್ತಿಯೊಬ್ಬರಿಂದಾಗಿ ಕನಿಷ್ಠ 23 ಮಂದಿಗೆ ವೈರಸ್ ಹರಡಿದೆ ಎಂದು ನಂಬಲಾಗಿದೆ.

ರಾಜ್ಯದಲ್ಲಿ ವರದಿಯಾಗಿರುವ 33 ಪ್ರಕರಣಗಳಲ್ಲಿ 23 ಸೋಂಕು ಪ್ರಕರಣಗಳು ಇವರಿಂದಾಗಿ ಹರಡಿದೆ ಎಂದು ಹೇಳಲಾಗಿದೆ. ಗುರುದ್ವಾರದ 70 ವರ್ಷದ ಧರ್ಮಗುರು ತನ್ನ ನೆರೆಯ ಗ್ರಾಮಗಳ ಇಬ್ಬರು ಸ್ನೇಹಿತರೊಂದಿಗೆ ಎರಡು ವಾರಗಳ ಜರ್ಮನಿ ಮತ್ತು ಇಟಲಿಯ ಪ್ರವಾಸ ಮುಗಿಸಿ ಮಾ. 6ರಂದು ದಿಲ್ಲಿಗೆ ಆಗಮಿಸಿದ್ದರು. ಅಲ್ಲಿಂದ ಪಂಜಾಬ್‌ಗೆ ತೆರಳಿದ್ದರು. ಆದರೆ ಕ್ವಾರೆಂಟೈನ್ ನಿಯಮವನ್ನು ಉಲ್ಲಂಘಿಸಿ ಎಲ್ಲಡೆ ಸಂಚರಿಸಿದ್ದರು.

ಮಾರ್ಚ್ 8-10ರಂದು ಆನಂದಪುರ್ ಸಾಹಿಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು ಶಹೀದ್ ಭಗತ್ ಸಿಂಗ್ ನಗರ ಜಿಲ್ಲೆಯ ತಮ್ಮ ಗ್ರಾಮಕ್ಕೆ ಮರಳಿದ್ದಾರೆ ಎಂದು ಅವರ ಚಲನವಲನಗಳನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಮತ್ತು ಅವರಿಂದ ಸೋಂಕಿಗೆ ಒಳಗಾದವರು ದೂರಿದ್ದಾರೆ.

ಕೊರೋನ ವೈರಸ್ ಪೊಸಿಟಿವ್ ಪರೀಕ್ಷೆಗೆ ಮುನ್ನ ಅವರು ಸುಮಾರು 100 ಜನರನ್ನು ಭೇಟಿಯಾದರು. ಅವರೊಂದಿಗೆ ವಿದೇಶಕ್ಕೆ ಪ್ರಯಾಣಿಸಿ ವಾಪಸಾಗಿದ್ದ ಸಹಚರರು ರಾಜ್ಯದಾದ್ಯಂತ 15 ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ ಎಂದು ನಂಬಲಾಗಿದೆ.

ಅವರ ಕುಟುಂಬದಲ್ಲಿ 14 ಮಂದಿ ಪೊಸಿಟವ್ ಪರೀಕ್ಷೆ ಮಾಡಿದ್ದಾರೆ. ಅವರ ಮೊಮ್ಮಗಳು ಮತ್ತು ಮೊಮ್ಮಗ ಹಲವು ಜನರನ್ನು ಭೇಟಿಯಾಗಿದ್ದರು. ಮೂವರು ವ್ಯಕ್ತಿಗಳ ಬೇಜವಾಬ್ದಾರಿ ವರ್ತನೆಯಿಂದಾಗಿ ಪ್ರತಿಯೊಬ್ಬ ವ್ಯಕ್ತಿಯನ್ನು ಪತ್ತೆಹಚ್ಚಲು ಅಧಿಕಾರಿಗಳು ಹಳ್ಳಿಯಿಂದ ಹಳ್ಳಿಗೆ ಹೋಗುತ್ತಿದ್ದಾರೆ.

ಈ ಮೂವರು ನವಾನ್ಶಹರ್, ಮೊಹಾಲಿ, ಅಮೃತಸರ, ಹೋಶಿಯಾರ್ಪುರ ಮತ್ತು ಜಲಂಧರ್‌ನಲ್ಲಿ ಕೊರೋನ ವೈರಸ್ ಸೋಂಕು ಹರಡಲು ಕಾರಣವೆಂದು ನಂಬಲಾಗಿದೆ.

 ಭಾರತದಾದ್ಯಂತ ಸುಮಾರು 700 ಕೊರೋನ ವೈರಸ್ ಪ್ರಕರಣಗಳು ದಾಖಲಾಗಿವೆ ಮತ್ತು 17 ಮಂದಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News