ಕೊರೋನ ವಿರುದ್ಧದ ಸಮರಕ್ಕೆ ಎಲ್ಲರೂ ಕೈಜೋಡಿಸೋಣ

Update: 2020-03-31 18:01 GMT

ಮಾನ್ಯರೇ,

ರಾಯಚೂರು ಜಿಲ್ಲೆಯ ಹಟ್ಟಿಯಲ್ಲಾದ ಘಟನಾವಳಿಯನ್ನು ಅಲ್ಲಿಯ ಗೆಳೆಯರು ಗಮನಕ್ಕೆ ತಂದರು. ಇದು ಅಲ್ಲಿ ಮಾತ್ರ ನಡೆದಿರುವಂಥದ್ದಲ್ಲ ಬೇರೆ ಬೇರೆ ಕಡೆ ಇಂಥ ಸಂಗತಿಗಳೇ ಜರುಗಿವೆ. ಕೊರೋನ ವೈರಸ್ ನಿಯಂತ್ರಣಕ್ಕಾಗಿ ಇಡೀ ಕರ್ನಾಟಕವೇ ಲಾಕ್‌ಡೌನ್ ಆಗಿದೆ. ಯಾವ ಪೂರ್ವ ತಯಾರಿ ಇಲ್ಲದೆ ಲಾಕ್ ಡೌನ್ ಆಗಿದ್ದರಿಂದ ರೈತರು ತಾಪತ್ರಯ ಅನುಭವಿಸುವಂತಾಗಿದೆ. ತಮ್ಮದು ರೈತ ಪರ ನಿಲುವು ಆಗಿದ್ದರಿಂದ ಬಗೆಹರಿಸಲು ಸಾಧ್ಯ ಇರುವ ಈ ಾಪತ್ರಯಗಳನ್ನು ನಿವಾರಿಸಿ ರೈತರನ್ನು ಈ ಸಂಕಟದಿಂದ ಮುಖ್ಯಮಂತ್ರಿ ಪಾರು ಮಾಡಬೇಕು.

ರೈತರು ಬೆಳೆದ ಕಾಯಿಪಲ್ಲೆ ಶಹರಕ್ಕೆ ಮಾರಾಟ ಮಾಡಲು ಬರಲೇಬೇಕು. ಹಟ್ಟಿಯಲ್ಲಿ ಸಂತೆ ದಿನ ರೈತರು ತಾವು ಬೆಳೆದ ಕಾಯಿಪಲ್ಲೆ ಮಾರುಕಟ್ಟೆಗೆ ತಂದರೆ ಮಾರಾಟ ಮಾಡಲು ಅವಕಾಶವನ್ನು ಅಲ್ಲಿಯ ಪೊಲೀಸರು ನೀಡಿಲ್ಲ. ಕಾಯಿಪಲ್ಲೆ ವಾಪಸ್ ಒಯ್ಯಲಾಗದೆ ಬೀದಿಗಳಲ್ಲಿ ಚೆಲ್ಲಿ ಹೋಗಿದ್ದಾರೆ. ಅದರಿಂದ ಆದ ನಷ್ಟ ಅಪಾರ. ಇದು ಒಂದೂರಿನ ಕಥೆಯಲ್ಲ. ಎಲ್ಲ ಕಡೆ ಈ ದೃಶ್ಯಾವಳಿ ನಡೆಯುವುದನ್ನು ಕಾಣುತ್ತೇವೆ. ಹೀಗಾಗಿ ಈ ಸರಕಾರಕ್ಕೆ ನಮ್ಮದೊಂದು ಮನವಿ ಇದೆ. ಸರಕಾರವೇ ಮುಂದೆ ನಿಂತು ಕಾಯಿಪಲ್ಲೆ ಖರೀದಿಸುವಂತಾಗಲಿ. ಪಂಚಾಯತ್/ನಗರಸಭೆ ಅಥವಾ ಆದೇಶ ಮಾಡಿದ ಕಡೆ ರೈತರು ತರಕಾರಿಗಳನ್ನು ತರುತ್ತಾರೆ. ಹೀಗೆ ಖರೀದಿಸಿದ ಸರಕಾರ ಕಾಯಿಪಲ್ಲೆಗಳನ್ನು ಹಾಫ್ಕಾಮ್ಸ್ (ತೋಟಗಾರಿಕೆ ಇಲಾಖೆ ಅಧಿಕಾರಿಗಳು) ಅಥವಾ ಬೇರೆ ಪರ್ಯಾಯ ವ್ಯವಸ್ಥೆ ಮಾಡಿ ಜನಗಳಿಗೆ ತಲುಪಿಸಬಹುದು. ಇಲ್ಲವೇ ಹೋಲ್ ಸೇಲ್ ಅಥವಾ ಕಿರುಕುಳ ವ್ಯಾಪಾರಸ್ಥರಿಗೆ ನೇರವಾಗಿ ಮಾರಿ ಶಹರದ ಜನರಿಗೆ ತಲುಪಿಸುವ ವ್ಯವಸ್ಥೆಯನ್ನೂ ಮಾಡಬಹುದು. ಸರಕಾರದ ಮಧ್ಯಸ್ಥಿಕೆಯಲ್ಲಿ ಈ ವ್ಯವಹಾರ ನಡೆಯಬೇಕು. ಹಣ ಸಂದಾಯ ನಗದು ಇಲ್ಲವೇ ಬ್ಯಾಂಕ್ ಮುಖಾಂತರ ಆಗಲಿ. ಹೀಗಾದರೆ ರೈತರು ತಾಪತ್ರಯ ಪಡುವುದು ತಪ್ಪುತ್ತದೆ. ಈಗಿರುವ ಪರಿಸ್ಥಿತಿಗೆ ಸರಿಯಾದ ಪರಿಹಾರವೂ ಸಿಗುತ್ತದೆ. ಮಾರುಕಟ್ಟೆಯಲ್ಲಿ ಜನಜಂಗುಳಿ ಸೇರುವುದು ತಪ್ಪುತ್ತದೆ, ಅಂತರ ಕಾಯ್ದುಕೊಂಡು ವ್ಯವಹಾರ ನಡೆಸಿದ ಹಾಗೆಯೂ ಆಗುತ್ತದೆ. ರೈತರ ತಾಪತ್ರಯ ನಿವಾರಣೆಗೆ ಇದು ಒಂದು ಪರಿಹಾರ. ಕೊರೋನ ವೈರಸ್ ವಿರುದ್ಧದ ಸಮರಕ್ಕೆ ಎಲ್ಲರೂ ಕೈ ಜೋಡಿಸೋಣ.

Writer - ಬಸವರಾಜ ಸೂಳಿಭಾವಿ

contributor

Editor - ಬಸವರಾಜ ಸೂಳಿಭಾವಿ

contributor

Similar News