ನಿಝಾಮುದ್ದೀನ್ ಗೆ ತೆರಳಿರುವುದನ್ನು ನಿರಾಕರಿಸಿದ ಆಂಧ್ರ ಡಿಸಿಎಂ

Update: 2020-04-01 05:35 GMT

ಹೈದರಾಬಾದ್ , ಎ.1:  ದಕ್ಷಿಣ ದಿಲ್ಲಿಯ  ನಿಝಾಮುದ್ದೀನ್‌ನಲ್ಲಿ ನಡೆದ ತಬ್ಲಿಘಿ ಜಮಾಅತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಿ ವದಂತಿಗಳನ್ನು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಅಮ್ಜದ್ ಬಾಷಾ ನಿರಾಕರಿಸಿದ್ದಾರೆ.

ನಿಝಾಮುದ್ದೀನ್‌ ಪ್ರದೇಶ ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ   ದೇಶದ ಹಲವು ರಾಜ್ಯಗಳಲ್ಲಿ  ಕೊರೋನ ವೈರಸ್ ಸೋಂಕು  ಹಾಗೂ ಸಾವಿಗೆ ಸಂಬಂಧಿಸಿದಂತೆ  ಹಾಟ್ ಸ್ಪಾಟ್ ಆಗಿದೆ. .

“ನಾನು ಮುಸ್ಲಿಂ ಮೀಸಲಾತಿ ವಿಷಯಕ್ಕೆ ಸಂಬಂಧಿಸಿ  ಮಾ 2 ರಂದು ದಿಲ್ಲಿಗೆ ಹೋಗಿದ್ದೆ ಆದರೆ ನಾನು ಯಾವುದೇ ಧಾರ್ಮಿಕ ಸಭೆಗಳಿಗೆ ಹೋಗಲಿಲ್ಲ. ಈ ಸಮಯದಲ್ಲಿ ಸರ್ಕಾರವನ್ನು ತೊಂದರೆಯಲ್ಲಿ ಸಿಲುಕಿಸಲು  ಇದು ತೆಲುಗು ದೇಶಂ ಪಕ್ಷದ ಆಧಾರರಹಿತ  ಆರೋಪವಾಗಿದೆ ”ಎಂದು ಬಾಷಾ ತಿಳಿಸಿದರು.

 “ನಾನು ರಾಜ್ಯದ ಉಪಮುಖ್ಯಮಂತ್ರಿ ಮತ್ತು ಅದರಂತೆ ನಡೆಯಲು ಪ್ರೋಟೋಕಾಲ್ ಹೊಂದಿದ್ದೇನೆ. ನನ್ನ ಪ್ರತಿಯೊಂದು ಚಟುವಟಿಕೆಯನ್ನು ದಾಖಲಿಸಲಾಗಿದೆ. ನಾನು ಮಾರ್ಚ್ 3 ರಂದು ದಿಲ್ಲಿಯ  ಎಪಿ ಭವನದಲ್ಲಿದ್ದೆ. ಮರುದಿನ ನಾನು ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿಯಾದೆ. ಮತ್ತು ಹೈಕೋರ್ಟ್‌ ಪೀಠದ ಮುಂದಿರುವ ಪ್ರಕರಣದ ಕುರಿತು ನಾವು ಸ್ವಲ್ಪ ಚರ್ಚೆ ನಡೆಸಿದೆವು. ನಂತರ ನಾನು ಆಂಧ್ರಪ್ರದೇಶದ ಕಡಪಾ ನನ್ನ ಕ್ಷೇತ್ರಕ್ಕೆ ಮರಳಿದೆ. ”

ಸೂಕ್ಷ್ಮ ಪರಿಸ್ಥಿತಿಯಲ್ಲಿ ನಕಲಿ ಸುದ್ದಿಗಳನ್ನು ಹರಡುವವರ ವಿರುದ್ಧ  ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಯೋಚಿಸುವೆ  ಎಂದು ಅವರು ಹೇಳಿದರು.

ಕೊರೋನ ವೈರಸ್ ಸೋಂಕು  ಪ್ರಕರಣಗಳು  ಮಂಗಳವಾರ ಆಂಧ್ರಪ್ರದೇಶದಲ್ಲಿ  ಹೆಚ್ಚಳಗೊಂಡಿದೆ. ರಾಜ್ಯದಲ್ಲಿ ದಾಖಲಾದ 44 ಪ್ರಕರಣಗಳಲ್ಲಿ 19 ದಿಲ್ಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲಿ ಕಂಡು ಬಂದಿವೆ . 700 ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದರು ಎಂದು ಶಂಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News