ಕಟ್ಟಡ ಕಾರ್ಮಿಕರಿಗೆ ಊಟ, ವಸತಿ ನೀಡದ ಡೆವಲಪರ್ಸ್‍ಗಳ ಪರವಾನಿಗೆ ರದ್ದು: ಸಚಿವ ಅಶೋಕ್ ಎಚ್ಚರಿಕೆ

Update: 2020-04-01 12:20 GMT

ಬೆಂಗಳೂರು, ಎ.1: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್‍ಡೌನ್ ಆಗಿರುವ ಕಾರಣ ಕಟ್ಟಡ ಕಾರ್ಮಿಕರಿಗೆ ಊಟ-ವಸತಿಯನ್ನು ಆಯಾ ಡೆವಲಪರ್ಸ್‍ಗಳೇ ಕಲ್ಪಿಸಬೇಕು. ಇಲ್ಲದಿದ್ದರೆ, ಡೆವಲಪರ್ಸ್‍ಗಳ ಪರವಾನಿಗೆ ರದ್ದು ಪಡಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನ ಸೋಂಕಿನ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಊಟ-ವಸತಿ ಕಲ್ಪಿಸುವುದು ಆಯಾಯ ಡೆವಲಪರ್ಸ್‍ಗಳ ಜವಾಬ್ದಾರಿ. ಇದನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ಅಂತಹ ಡೆವಲಪರ್ಸ್‍ಗಳು ರಾಜ್ಯಕ್ಕೆ ಅಗತ್ಯವಿಲ್ಲವೆಂದು ತಿಳಿಸಿದ್ದಾರೆ.

ಒಟ್ಟು 1.68 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿದ್ದಾರೆ. ಅವರೆಲ್ಲರಿಗೂ ಲಾಕ್‍ ಡೌನ್ ಮುಗಿಯುವವರೆಗೂ ಊಟ-ವಸತಿ ಸೇರಿದಂತೆ ಮತ್ತಿತರ ಸೇವೆಗಳನ್ನು ಒದಗಿಸುವುದು ಆಯಾ ಡೆವಲಪರ್ಸ್‍ಗಳ ಕರ್ತವ್ಯ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಡೆವಲಪರ್ಸ್‍ಗಳ ಲೈಸನ್ಸ್ ಹಾಗೂ ಕಟ್ಟಡದ ಪರವಾನಿಗೆಯನ್ನು ರದ್ದುಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News