'ಕಾಲೇಜುಗಳಿಗೆ 50 ದಿನ ರಜೆ' ಸುಳ್ಳು ಸುದ್ದಿ: ಶಿಕ್ಷಣ ಇಲಾಖೆ ಆಯುಕ್ತರಿಂದ ಸ್ಪಷ್ಟನೆ

Update: 2020-04-01 16:49 GMT

ಬೆಂಗಳೂರು, ಎ.4: ಕೊರೋನ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಸಂಬಂಧ ಮುಂಜಾಗ್ರತ ಕ್ರಮವಾಗಿ ಸರಕಾರಿ, ಖಾಸಗಿ ಅನುದಾನಿತ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಮಾ.31ರಿಂದ ಎ.14ರವರೆಗೆ ರಜೆಯನ್ನು ಮುಂದುವರೆಸಿ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ.

ಆದರೆ, ಉಲ್ಲೇಖಿತ ಸುತ್ತೋಲೆಯು ಕಾಲೇಜು ಶಿಕ್ಷಣ ನಿರ್ದೇಶಕರ ಸುಳ್ಳು ಸಹಿಯೊಂದಿಗೆ ಎ.1ರಿಂದ ಮೇ 20ರವರೆಗೆ ಒಟ್ಟು 50 ದಿನಗಳಿಗೆ ರಜೆ ಘೋಷಿಸಲಾಗಿದೆ ಎಂದು ಹೊರಡಿಸಲಾಗಿರುವ ಸುತ್ತೋಲೆಯು ಸುಳ್ಳಾಗಿದ್ದು, ಇಂತಹ ಸುತ್ತೋಲೆಯನ್ನು ಇಲಾಖೆಯಿಂದ ಹೊರಡಿಸಿಲ್ಲ. ಅಲ್ಲದೆ, ಇಂತಹ ಸುಳ್ಳು ಸುದ್ದಿ ಹಬ್ಬಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News