ಅಂತ್ಯಸಂಸ್ಕಾರದಲ್ಲಿ 10ಕ್ಕಿಂತ ಹೆಚ್ಚು ಮಂದಿ ಸೇರಬಾರದು: ಬಿಬಿಎಂಪಿ ಆಯುಕ್ತರ ಆದೇಶ

Update: 2020-04-02 15:32 GMT

ಬೆಂಗಳೂರು, ಎ.2: ದೇಶಾದ್ಯಂತ ಕೊರೋನ ಸೋಂಕು ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇರುವುದರಿಂದ ಕುಟುಂಬದಲ್ಲಿ ಯಾರಾದರೂ ಸಾವನ್ನಪ್ಪಿದರೆ ಅವರ ಅಂತ್ಯಸಂಸ್ಕಾರಕ್ಕೆ 10 ಮಂದಿಗಿಂತ ಹೆಚ್ಚಿನವರು ಸೇರಬಾರದೆಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಬೆಂಗಳೂರಿನಲ್ಲಿ 132 ಸ್ಮಶಾನಗಳು ಮತ್ತು 13 ಶವಾಗಾರಗಳಿವೆ. ಸ್ಮಶಾನಗಳನ್ನು ನಗರಸಭೆ ಮತ್ತು ಖಾಸಗಿ ಟ್ರಸ್ಟ್ ಗಳು ನಿರ್ವಹಿಸುತ್ತವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾರೇ ನಿಧನ ಹೊಂದಿದರೂ ಅವರ ಅಂತ್ಯ ಸಂಸ್ಕಾರದಲ್ಲಿ ಕೇವಲ 10ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ,

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಂತ್ಯ ಸಂಸ್ಕಾರದ ವೇಳೆ ಸ್ಮಶಾನದೊಳಕ್ಕೆ ಹೆಚ್ಚಿನ ಜನರ ಪ್ರವೇಶವನ್ನು ನಿರಾಕರಿಸಲಾಗಿದೆ. ಹಾಗೂ ಸ್ಮಶಾನದಲ್ಲಿ ಸೋಪು ಮತ್ತು ಹ್ಯಾಂಡ್ ವಾಶ್‍ಗಳನ್ನು ಇಟ್ಟಿರಬೇಕು. ದಿನಕ್ಕೆ ಎರಡು ಬಾರಿ ಸ್ಯಾನಿಟೈಸ್ ಮಾಡಬೇಕೆಂದು ಸ್ಮಶಾನದ ನಿರ್ವಾಹಕರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News