ಬೆಂಗಳೂರು: ಬಂಬೂ ಬಜಾರ್ ನಲ್ಲಿ ಅಗ್ನಿ ಆಕಸ್ಮಿಕ; 12 ಅಂಗಡಿಗಳು ಭಸ್ಮ

Update: 2020-04-02 13:24 GMT

ಬೆಂಗಳೂರು, ಎ.2: ನಗರದ ಬಂಬೂ ಬಜಾರ್ ನಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಅಗ್ನಿ ಆಕಷ್ಮಿಕದಲ್ಲಿ 12 ಅಂಗಡಿಗಳು ಭಸ್ಮವಾಗಿದ್ದು, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.

ನಗರದ ಸಿಟಿ ಮಾರ್ಕೆಟ್ ಪ್ರದೇಶದಲ್ಲಿರುವ ಬಂಬೂ ಬಜಾರ್ ನ ಅಂಗಡಿಯೊಂದರಲ್ಲಿ ಗುರುವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿತು. ಅಗ್ನಿಯ ಕೆನ್ನಾಲಿಗೆ ಇತರ ಮಳಿಗೆಗಳಿಗೂ ವ್ಯಾಪಿಸಿತು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದು, ಈ ವೇಳೆಗೆ ನಾಲ್ಕು ಮಳಿಗೆಗೆಳು ಸಂಪೂರ್ಣ ಆಹುತಿಯಾಗಿತ್ತು.

ಜ್ವಾಲೆಗಳು ಇನ್ನೂ ಎಂಟು ಅಂಗಡಿಗಳಿಗೆ ವ್ಯಾಪಿಸಿ ಎಲ್ಲವೂ ಬೂದಿಯಾಗಿವೆ ಎಂದು ಅಗ್ನಿಶಾಮಕ ದಳದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಲವು ಗಂಟೆಗಳ ಕಾರ್ಯಾಚರಣೆ ನಂತರ ಬೆಂಕಿಯನ್ನು ಸಿಬ್ಬಂದಿ ಶಮನಗೊಳಿಸಿದ್ದಾರೆ.

ಈ ಅಗ್ನಿ ಆಕಸ್ಮಿಕಕ್ಕೆ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಹಿರಿಯ ಪೊಲೀಸ್ ಅಥಿಕಾರಿಗಳೂ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತನಿಖೆಗೆ ಆದೇಶಿಸಲಾಗಿದೆ. ಈ ಘಟನೆಯಲ್ಲಿ ಲಕ್ಷಾಂತರ ರೂ. ಗಳ ಮೌಲ್ಯದ ಮರದ ದಿಮ್ಮಿಗಳು ಮತ್ತು ಇತರ ವಸ್ತುಗಳು ಬೂದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News