ಉಸಿರಾಟ, ಸಂಭಾಷಣೆಯ ಮೂಲಕವೂ ಕೊರೋನ ಹರಡುವ ಸಾಧ್ಯತೆ: ಖ್ಯಾತ ವಿಜ್ಞಾನಿಯ ಎಚ್ಚರಿಕೆ

Update: 2020-04-04 16:43 GMT

ವಾಶಿಂಗ್ಟನ್, ಮಾ.4: ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನ ವೈರಸ್, ಸಹಜ ಉಸಿರಾಟ ಹಾಗೂ ಸಂಭಾಷಣೆಯ ಸಂದರ್ಭದಲ್ಲೂ ಗಾಳಿಯಲ್ಲಿ ಹರಡುವ ಸಾಧ್ಯತೆಯಿದೆಯೆಂಬ ಅಮೆರಿಕದ ಖ್ಯಾತ ವಿಜ್ಞಾನಿಯೊಬ್ಬರು ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮನೆಯಿಂದ ಹೊರಗೆ ಬರುವಾಗ ಮಾಸ್ಕ್‌ ಧರಿಸುವುದನ್ನು ಶಿಫಾರಸು ಮಾಡಬೇಕೆಂದು ಅವರು ಅಮೆರಿಕ ಸರಕಾರವನ್ನು ಆಗ್ರಹಿಸಿದ್ದಾರೆ.

ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸೋಂಕು ರೋಗ ವಿಭಾಗದ ವರಿಷ್ಠ ಆ್ಯಂಥನಿ ಪೌಸಿ ಅವರು ಶನಿವಾರ ಫಾಕ್ಸ್ ನ್ಯೂಸ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಕೊರೋನ ವೈರಸ್ ಕೆಮ್ಮುವಾಗ ಹಾಗೂ ಸೀನುವಾಗ ಮಾತ್ರವಲ್ಲದೆ ಜನರು ಪರಸ್ಪರ ಮಾತನಾಡುವಾಗಲೂ ಹರಡುವ ಸಾಧ್ಯತೆಯಿದೆಯೆಂಬ ಮಾಹಿತಿ ಇತ್ತೀಚೆಗೆ ಲಭ್ಯವಾಗಿದೆ. ಆದುದರಿಂದ ಜನಸಾಮಾನ್ಯರು ಮಾಸ್ಕ್‌ಗಳನ್ನು ಧರಿಸುವ ಕುರಿತಂತೆ ಸರಕಾರ ಜಾರಿಗೊಳಿಸಿರುವ ಮಾರ್ಗದರ್ಶಿ ಸೂತ್ರಗಳಲ್ಲಿ ಬದಲಾವಣೆ ಮಾಡಬೇಕಿದೆಯೆಂದು ಹೇಳಿದ್ದಾರೆ. ಕೊರೋನ ವೈರಸ್‌ನ ಸಂಶೋಧನೆ ಕುರಿತಾದ ಸಂಕ್ಷಿಪ್ತ ವರದಿಯೊಂದನ್ನು ರಾಷ್ಟ್ರೀಯ ವಿಜ್ಞಾನ ಅಕಾಡಮಿ ಎಪ್ರಿಲ್ 1ರಂದು ಶ್ವೇತಭವನಕ್ಕೆ ಕಳುಹಿಸಿಕೊಟ್ಟ ಆನಂತರ ಫೌಸಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News