ಇಂದಿರಾ ಕ್ಯಾಂಟೀನ್‍ನಲ್ಲಿ ಆಹಾರ ನಿಲುಗಡೆ: ಸಿಪಿಎಂ ಖಂಡನೆ

Update: 2020-04-05 11:19 GMT

ಬೆಂಗಳೂರು, ಎ.5: ಬಡವರಿಗೆ, ನಿರ್ಗತಿಕರಿಗೆ ಆಹಾರ ನೀಡುವ ಇಂದಿರಾ ಕ್ಯಾಂಟೀನ್‍ನಲ್ಲಿ ಆಹಾರ ಪೂರೈಕೆಯನ್ನು ರಾಜ್ಯ ಸರಕಾರವು ನಿಲ್ಲಿಸಿರುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಸಮಿತಿ ಖಂಡಿಸಿದೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಲವು ಜನಜೀವನಾಧಾರ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಆಹಾರಕ್ಕಾಗಿ ನಗರದಲ್ಲಿ ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಸರಕಾರ ಹಿಂದಿನ ಸರಕಾರ ಮಾಡಿದ್ದ ಇಂದಿರಾ ಕ್ಯಾಂಟೀನ್‍ಗಳನ್ನು ಮುಚ್ಚಲು ಮುಂದಾಗಿರುವ ಕ್ರಮ ಸರಿಯಲ್ಲ. ಇದರಿಂದ ಹಸಿದವರಿಗೆ ಮತ್ತಷ್ಟು ತೊಂದರೆಯಾಗಲಿದೆ.

ಲಾಕ್‍ಡೌನ್ ಆರಂಭವಾದ ಬಳಿಕ ಪ್ರತಿದಿನ ಮೂರು ಹೊತ್ತು ಆಹಾರ ನೀಡುವುದನ್ನು ಆರಂಭಿಸಿ ಒಂದೇ ದಿನದಲ್ಲಿ ನಿಲ್ಲಿಸಿದ ಕ್ರಮವೂ ಸಲ್ಲ. ಹಸಿದವರಿಗೆ ಅನ್ನ ನೀಡುವುದಕ್ಕೆ ಸರಕಾರ ಹಿಂದೆ ಮುಂದೆ ನೋಡಬಾರದು. ಸರಕಾರದ ವಿರುದ್ಧ ಟೀಕೆಗಳು ಕೇಳಿ ಬಂದ ನಂತರ ಮರು ಆರಂಭ ಮಾಡಿದ್ದರು. ಕ್ಯಾಂಟೀನ್‍ಗೆ ಬರುವವರಿಗೆ ಆಹಾರ ಪೊಟ್ಟಣ ಸರಬರಾಜಿಗೆ ಮುಂದಾಯಿತು. ಇದೀಗ ಅದನ್ನು ನಿಲ್ಲಿಸಿ ಕಾರ್ಮಿಕ ಇಲಾಖೆಗೆ ಅದರ ಸಂಪೂರ್ಣ ಹೊಣೆ ಹೊರಿಸಲು ಮುಂದಾಗಿದೆ.

ಸರಕಾರದ ಈ ರೀತಿಯ ದಿನ ದಿನವೂ ಬದಲಾಗುತ್ತಿರುವ ಸರಕಾರದ ಧೋರಣೆಗಳಿಂದ ಬಡಜನತೆಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ದಿನಕ್ಕೆ ಮೂರು ಹೊತ್ತು ಇಂದಿರಾ ಕ್ಯಾಂಟೀನ್‍ನಲ್ಲಿ ಆಹಾರವನ್ನು ಉಚಿತವಾಗಿ ಒದಗಿಸಬೇಕು ಎಂದು ಸಿಪಿಎಂ ಒತ್ತಾಯಿಸಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News