ಆನ್‍ಲೈನ್ ಜೂಜಾಟ: ಇಬ್ಬರು ಸಿಸಿಬಿ ಬಲೆಗೆ

Update: 2020-04-05 11:33 GMT

ಬೆಂಗಳೂರು, ಎ.5: ಆನ್‍ಲೈನ್ ಪೋಕರ್ ಜೂಜಾಟದಲ್ಲಿ ತೊಡಗಿದ್ದ ಆರೋಪದಡಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೋರಮಂಗಲದ ವೆಂಕಟಪುರ ಯತೀಶ್(23), ಮಾರುತಿನಗರದ ಪುನೀತ್(31) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಯತೀಶ್ ವಸಂತನಗರದ 8ನೇ ಮುಖ್ಯರಸ್ತೆಯ ಮನೆಯೊಂದರಲ್ಲಿ ಮೊಬೈಲ್ ಫೋನ್‍ನಲ್ಲಿ ವಾಟ್ಸಪ್ ಗ್ರೂಪ್ ಮಾಡಿಕೊಂಡು ಪೋಕರ್ ಗೇಮ್ ಜೂಜಾಟ ಮಾಡಿಸುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಕಾಮಾಕ್ಷಿಪಾಳ್ಯದ ಮಾರುತಿ ನಗರದಲ್ಲಿ ಮೊಬೈಲ್‍ನಲ್ಲಿ ಪೋಕರ್ ಗೇಮ್ ಜೂಜಾಟ ಆಡಿಸುತ್ತಿದ್ದ ಆರೋಪಿ ಪುನೀತ್‍ನಿಂದ 52,300 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಪ್ಲೇವಿನ್ ವೆಬ್‍ಸೈಟ್ ಮೂಲಕ ಜೂಜಾಟವಾಡಿಸುತ್ತಿದ್ದ ಬುಕ್ಕಿಯಾಗಿದ್ದಾನೆ ಎಂದು ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News