ಅಮೆರಿಕ ಮೃಗಾಲಯದ ಹುಲಿಗೂ ಕೊರೋನ ಸೋಂಕು

Update: 2020-04-06 03:54 GMT
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್, ಎ.6: ಇಲ್ಲಿನ ಬ್ರೋಂಕ್ಸ್ ಮೃಗಾಲಯದಲ್ಲಿರುವ ನಾಲ್ಕು ವರ್ಷದ ಮಲಯಾ ಹೆಣ್ಣು ಹುಲಿಗೆ ಕೊರೋನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಲೋವಾದಲ್ಲಿರುವ ರಾಷ್ಟ್ರೀಯ ಪಶು ಸೇವೆಗಳ ಪ್ರಯೋಗಾಲಯ ಪ್ರಕಟಿಸಿದೆ.

ನಾದಿಯಾ, ಸಹೋದರಿ ಅಝೂಲ್ ಮತ್ತು ಇತರ ಎರಡು ಅಮೂರ್ ಹುಲಿಗಳು ಹಾಗೂ ಮೂರು ಆಫ್ರಿಕನ್ ಸಿಂಹಗಳಿಗೆ ಒಣ ಕಫದ ಲಕ್ಷಣಗಳು ಕಾಣಿಸಿಕೊಂಡಿದ್ದು, ಎಲ್ಲವೂ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಪ್ರಯೋಗಾಲಯ ಮೂಲಗಳು ಹೇಳಿವೆ. ಮೃಗಾಲಯ ಸಹಾಯಕನಿಂದ ಈ ಸೋಂಕು ಹುಲಿಗಳಿಗೆ ಹರಡಿರುವ ಸಾಧ್ಯತೆ ಇದೆ.

ತೀರಾ ಎಚ್ಚರಿಕೆಯಿಂದ ನಾದಿಯಾಳನ್ನು ತಪಾಸಣೆಗೆ ಗುರಿಪಡಿಸಿದೆವು. ನಾವು ಪಡೆಯುವ ಅನುಭವ ಖಚಿತವಾಗಿಯೂ ಕೋವಿಡ್-19 ಬಗ್ಗೆ ತಿಳಿದುಕೊಳ್ಳಲು ವಿಶ್ವಕ್ಕೆ ಕೊಡುಗೆಯಾಗುತ್ತದೆ ಎಂದು ಮೃಗಾಲಯದ ಪ್ರಕಟನೆ ಹೇಳಿದೆ. ಹುಲಿಗೆ ಸ್ವಲ್ಪಮಟ್ಟಿಗೆ ಅಜೀರ್ಣದ ಸಮಸ್ಯೆ ಕಾಡುತ್ತಿದೆ. ಉಳಿದಂತೆ ಹುಲಿ ಚೆನ್ನಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಅವುಗಳ ಕಾಳಜಿ ನೋಡಿಕೊಳ್ಳುವ ಸಹಾಯಕರ ಜತೆ ಪ್ರತಿಸ್ಪಂದಿಸುತ್ತಿದೆ ಎಂದು ವಿವರಿಸಲಾಗಿದೆ.

ಹುಲಿ, ಸಿಂಹಗಳಲ್ಲಿ ವೈರಸ್ ಹೇಗೆ ಅಭಿವೃದ್ಧಿಯಾಗುತ್ತದೆ ಎನ್ನುವುದು ತಿಳಿದಿಲ್ಲ ಜತೆಗೆ ವಿವಿಧ ಪ್ರಾಣಿ ಪ್ರಬೇಧಗಳು ಹೊಸ ಸೋಂಕುಗಳಿಗೆ ಭಿನ್ನವಾಗಿ ಪ್ರತಿಕ್ರಿಯಿಸುವ ಸಾಧ್ಯತೆ ಇದೆ. ಎಲ್ಲ ಪ್ರಾಣಿಗಳ ಬಗ್ಗೆಯೂ ನಿಗಾ ವಹಿಸಲಾಗಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News