ಎ.17ರಂದೇ ನಿಖಿಲ್ ಕುಮಾರಸ್ವಾಮಿ ವಿವಾಹ: ಕುಮಾರಸ್ವಾಮಿ

Update: 2020-04-06 11:09 GMT

ಬೆಂಗಳೂರು, ಎ.6: ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿಯ ವಿವಾಹವು ಪೂರ್ವನಿಗದಿಯಂತೆ ಎಪ್ರಿಲ್ 17ರಂದೇ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಅವರು, ಕೊರೋನ ವೈರಸ್ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ವಿವಾಹ ಸರಳವಾಗಿ ಮನೆ ಸದಸ್ಯರ ಸಮ್ಮುಖದಲ್ಲಿ ನಡೆಸಲಾಗುವುದು. ಅದು ನಮ್ಮ ಅಥವಾ ಯುವತಿಯ ಮನೆಯಲ್ಲಿ ನಿಶ್ಚಿತ ಶುಭ ಲಗ್ನದಲ್ಲಿ ನಡೆಯಲಿದ್ದು, ಮುಂದೆ ಸಮಯ ನೋಡಿ ರಾಮನಗರದಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News