ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆ

Update: 2020-04-07 13:24 GMT

ಬೆಂಗಳೂರು, ಎ.7: ರಾಜ್ಯದಲ್ಲಿ ಇದುವರೆಗೂ 175 ಕೋವಿಡ್19 ಪ್ರಕರಣಗಳು ದೃಢಪಟ್ಟಿದೆ. ಅದರಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದು, 25 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮಂಗಳವಾರ 12 ಹೊಸ ಪ್ರಕರಣಗಳು ವರದಿಯಾಗಿವೆ.

ಕಲಬುರಗಿ, ಬಾಗಲಕೋಟೆ, ಮಂಡ್ಯ, ಬೆಂಗಳೂರು, ಗದಗ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿದ್ದು, ಈ ಜಿಲ್ಲೆಗಳು ಸೇರಿದಂತೆ ರಾಜ್ಯದ ಎಲ್ಲ ಕಡೆಗಳಲ್ಲಿ ಸೋಂಕು ಹರಡದಂತೆ ಸರಕಾರ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಶ್ರಮಿಸುತ್ತಿದೆ.

ರೋಗಿಗಳ ವಿವರ:
ರೋಗಿ 164: ಬಾಗಲಕೋಟೆ ಜಿಲ್ಲೆಯವರಾದ 33 ವರ್ಷದ ಪುರುಷರಾಗಿದ್ದು, ದಿಲ್ಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು.
ರೋಗಿ 165: ಬಾಗಲಕೋಟೆ ಜಿಲ್ಲೆಯವರಾದ 41 ವರ್ಷದ ಮಹಿಳೆಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ನೆರೆಯವರಾಗಿದ್ದಾರೆ. ಇವರನ್ನು ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.
ರೋಗಿ 166: ಗದಗ ಜಿಲ್ಲೆಯ 80 ವರ್ಷದ ವೃದ್ಧರಾಗಿದ್ದು, ತೀವ್ರ ಉಸಿರಾಟದ ಸಮಸ್ಯೆಯ ಹಿನ್ನೆಲೆಯವರಾಗಿದ್ದಾರೆ.
ರೋಗಿ 167: ಬಿಬಿಎಂಪಿ ವ್ಯಾಪ್ತಿಯ 29 ವರ್ಷದ ಪುರುಷರಾಗಿದ್ದು, ದಿಲ್ಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಿದೆ. 
ರೋಗಿ 168: ಬಿಬಿಎಂಪಿ ವ್ಯಾಪ್ತಿಯ 50 ವರ್ಷದ ಪುರುಷರಾಗಿದ್ದು, ದಿಲ್ಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಿದೆ. 
ರೋಗಿ 169: ಬೆಂಗಳೂರು ಗ್ರಾಮಾಂತರ ಜಿಲ್ಲೆಯ 35 ವರ್ಷದ ಪುರುಷರಾಗಿದ್ದು, ದಿಲ್ಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಿದೆ. 
ರೋಗಿ 170: ಬಿಬಿಎಂಪಿ ವ್ಯಾಪ್ತಿಯ 68 ವರ್ಷದ ಪುರುಷರಾಗಿದ್ದು, ದುಬೈ ಪ್ರಯಾಣ ಮಾಡಿದ ಹಿನ್ನೆಲೆಯುಳ್ಳವರಾಗಿದ್ದರು.
ರೋಗಿ 171: ಮಂಡ್ಯ ಜಿಲ್ಲೆಯ ಮೂಲದವರಾದ 32 ವರ್ಷದ ವ್ಯಕ್ತಿಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟ ರೋಗಿ 134, 135, 136, 137, 138 ಟಿ.ಜಿ. ಸಂಪರ್ಕವಿರುವ ವ್ಯಕ್ತಿಯಾಗಿದ್ದಾರೆ.
ರೋಗಿ 172: ಮಂಡ್ಯ ಜಿಲ್ಲೆಯ ಮೂಲದವರಾದ 36 ವರ್ಷದ ವ್ಯಕ್ತಿಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟ ರೋಗಿ 134, 135, 136, 137, 138 ಟಿ.ಜಿ. ಸಂಪರ್ಕವಿರುವ ವ್ಯಕ್ತಿಯಾಗಿದ್ದಾರೆ.
ರೋಗಿ 173: ಮಂಡ್ಯ ಜಿಲ್ಲೆಯ ಮೂಲದವರಾದ 65 ವರ್ಷದ ವ್ಯಕ್ತಿಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟ ರೋಗಿ 134, 135, 136, 137, 138 ಟಿ.ಜಿ. ಸಂಪರ್ಕವಿರುವ ವ್ಯಕ್ತಿಯಾಗಿದ್ದಾರೆ. ಮಂಡ್ಯ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.
ರೋಗಿ 174: ಕಲಬುರಗಿ ಜಿಲ್ಲೆಯವರಾದ 28 ವರ್ಷದ ಮಹಿಳೆಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟ ರೋಗಿ 124 ರ ಸಂಪರ್ಕಿತರಾಗಿದ್ದಾರೆ. 
ರೋಗಿ 175: ಕಲಬುರಗಿ ಜಿಲ್ಲೆಯವರಾದ 57 ವರ್ಷದ ಪುರುಷರಾಗಿದ್ದು, ತೀವ್ರ ಉಸಿರಾಟದ ಸೋಂಕಿನ ಹಿನ್ನೆಲೆಯುಳ್ಳವರಾಗಿದ್ದಾರೆ. ಇವರನ್ನು ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News