ಬಿಬಿಎಂಪಿಯಿಂದ ದಿನಸಿ ಕಿಟ್ ವಿತರಿಸಲು ಸಹಾಯವಾಣಿ ಆರಂಭ

Update: 2020-04-08 12:13 GMT

ಬೆಂಗಳೂರು, ಎ.8: ಲಾಕ್‍ಡೌನ್ ಹಿನ್ನೆಲೆಯಲ್ಲಿ ವಲಸೆ ಹಾಗೂ ಕಟ್ಟಡ ಕೂಲಿ ಕಾರ್ಮಿಕರ ಕುಟುಂಬಗಳು ಹಾಗೂ ಅಗತ್ಯವಿರುವವರು ಆಹಾರ ಪದಾರ್ಥಗಳ(ದಿನಸಿ) ಕಿಟ್ ಪಡೆಯಲು ಅನುಕೂಲವಾಗುವಂತೆ ಬಿಬಿಎಂಪಿಯಿಂದ ಸಹಾಯವಾಣಿಯನ್ನು ಆರಂಭಿಸಲಾಗಿದೆ.

ನಾಲ್ಕೈದು ದಿನಗಳಿಂದ ಕಟ್ಟಡ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಹಾಗೂ ಬಡವರ್ಗದ ಸಾವಿರಾರು ಕುಟುಂಬಗಳನ್ನು ಗುರುತಿಸಿ ದಿನಸಿ ಕಿಟ್‍ಗಳನ್ನು ನೀಡಲಾಗಿದೆ. ಪಾಲಿಕೆ ಅಧಿಕಾರಿಗಳ ಗಮನಕ್ಕೆ ಬಾರದ ಕುಟುಂಬಗಳಿಗೆ ನೆರವಾಗಲು ಸಹಾಯವಾಣಿ ಆರಂಭಿಸಲಾಗಿದೆ. ಕರೆ ಮಾಡಿದರೆ ಫಲಾನುಭವಿಗಳು ಇರುವ ಸ್ಥಳಕ್ಕೆ ಬಂದು ಕಿಟ್ ನೀಡಲಾಗುತ್ತದೆ. ಸಹಾಯವಾಣಿ ಜತೆಗೆ ವಲಯವಾರು ಬಿಬಿಎಂಪಿ ಕಂಟ್ರೋಲ್‍ ರೂಂ ನಂಬರ್ ಗಳಿಗೆ ಕರೆ ಮಾಡಿ ದಿನಸಿ ಕಿಟ್ ನೀಡುವಂತೆ ಮನವಿ ಮಾಡಬಹುದಾಗಿದೆ.

ಯಾರಿಗೆ ಕಿಟ್‍ ಅಗತ್ಯ ಇರುತ್ತದೆಯೋ ಅವರ ಸ್ಥಿತಿಯನ್ನು ಅವಲೋಕನೆ ಮಾಡಿ ನೀಡಲಾಗುತ್ತದೆ. ಮಾಹಿತಿಗೆ ವಯಲವಾರು ಆಯುಕ್ತರನ್ನು ಸಂಪರ್ಕಿಸಬಹುದಾಗಿದೆ.

ವ್ಯಾಪಾರಿಗಳಿಂದ ದಿನಸಿ ಕಿಟ್‍ಗೆ ಮನವಿ: ಕೇಂದ್ರ ಸರಕಾರ ಲಾಕ್‍ಡೌನ್ ಘೋಷಿಸುವ ಮೊದಲೇ ರಾಜ್ಯದಲ್ಲಿ ಸರಕಾರ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಹೀಗಾಗಿ, ನಗರದಾದ್ಯಂತ ಬೀದಿಬದಿ ವ್ಯಾಪಾರಿಗಳ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅದರ ಪರಿಣಾಮ ನೂರಾರು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಹೀಗಾಗಿ, ಇವರಿಗೂ ಕಿಟ್ ವಿತರಿಸಬೇಕೆಂದು ರಾಜ್ಯ ಬೀದಿಬದಿ ವ್ಯಾಪಾರಿಗಳ ಸಂಘಟನೆ ಮನವಿ ಮಾಡಿದೆ.

ದೂರವಾಣಿ ಸಂಖ್ಯೆಗಳು:
ಪೂರ್ವ: 080-22975803
ಪಶ್ಚಿಮ: 080-23463366
ದಕ್ಷಿಣ: 080-26566362
ಬೊಮ್ಮನಹಳ್ಳಿ: 080- 25735642
ಆರ್.ಆರ್.ನಗರ: 080-28600954
ದಾಸರಹಳ್ಳಿ: 080-28394909
ಮಹದೇವಪುರ: 080-28512300
ಯಲಹಂಕ: 080-23636671

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News