ಕಬ್ಬನ್ ಪಾರ್ಕ್ ಸುತ್ತಮುತ್ತ ಪಕ್ಷಿಗಳಿಗೆ ನೀರು ಒದಗಿಸಲು ಹೈಕೋರ್ಟ್ ಸೂಚನೆ

Update: 2020-04-09 14:21 GMT

ಬೆಂಗಳೂರು, ಎ.9: ಕಬ್ಬನ್ ಪಾರ್ಕ್ ಹಾಗೂ ಸುತ್ತಮುತ್ತಲಿನ ಪಕ್ಷಿ, ಪ್ರಾಣಿಗಳಿಗೆ ಕುಡಿಯಲು ಹೈಕೋರ್ಟ್ ವಾಹನ ನಿಲುಗಡೆ ಪ್ರದೇಶದಲ್ಲಿರುವ ಸಣ್ಣ ಗುಂಡಿಗೆ ನೀರು ತುಂಬಿಸಿ ಎಂದು ತೋಟಗಾರಿಗೆ ಇಲಾಖೆ ನಿರ್ದೇಶಕರಿಗೆ ಹೈಕೋರ್ಟ್ ಸೂಚಿಸಿದೆ.

ಈ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ಆದೇಶದ ಅನುಸಾರ, ಆಡಳಿತ ವಿಭಾಗದ ರಿಜಿಸ್ಟ್ರಾರ್ ವೆಂಕಟೇಶ್ ನಾಯಕ್ ತೋಟಗಾರಿಕೆ ಇಲಾಖೆಗೆ ಎ.7ರಂದು ಪತ್ರ ಬರೆದು ಸೂಚಿಸಿದ್ದಾರೆ.

ಕಬ್ಬನ್ ಪಾರ್ಕ್‍ನಲ್ಲಿ ನೂರಾರು ಬಗೆಯ ಪಕ್ಷಿ, ಅಳಿಲು, ನಾಯಿಗಳಿವೆ. ಅವುಗಳಿಗೆ ಕುಡಿಯುವ ನೀರು ಒದಗಿಸಲು ಹೈಕೋರ್ಟ್ ವಾಹನ ನಿಲುಗಡೆ ಜಾಗದಲ್ಲಿ ಮೂರು ಸಿಮೆಂಟ್ ಪಾಟ್ ಹಾಗೂ ತೆರೆದ ಗುಂಡಿ ನಿರ್ಮಿಸಲಾಗಿದೆ. ಅವುಗಳಲ್ಲಿ ನೀರು ತುಂಬಿಸುವ ಕೆಲಸವನ್ನು ತೋಟಗಾರಿಕೆ ಇಲಾಖೆ ನಿರ್ವಹಣೆ ಮಾಡುತ್ತಿತ್ತು. ಆದರೆ, ಲಾಕ್‍ಡೌನ್‍ನಿಂದ ನೀರು ತುಂಬಿಸುವವರಿಲ್ಲದೆ ಅವು ಬತ್ತಿ ಹೋಗಿವೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ನರಸಿಂಹಮೂರ್ತಿ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News