ಬೆಂಗಳೂರು: ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರೌಡಿಶೀಟರ್ ಹತ್ಯೆ
Update: 2020-05-03 20:17 IST
ಬೆಂಗಳೂರು, ಮೇ.3:ಗಂಭೀರ ಅಪರಾಧ ಆರೋಪದಡಿ ರೌಡಿಪಟ್ಟಿಯಲ್ಲಿದ್ದ ಬುಜ್ಜು(30) ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಹತ್ಯೆಗೈದಿರುವ ಘಟನೆ ಇಲ್ಲಿನ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕೆ.ಜಿ.ಹಳ್ಳಿಯ ಹೊಸ ಬಾಗಲೂರು ಲೇಔಟ್‍ನಲ್ಲಿ ವಾಸವಾಗಿ ಬುಜ್ಜು ಅನ್ನು ಹಳೇ ದ್ವೇಷದ ಹಿನ್ನೆಲೆ ದುಷ್ಕರ್ಮಿಗಳು ಹತ್ಯೆಗೈದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.