ಬೆಂಗಳೂರು: ಊರುಗಳಿಗೆ ಹಿಂದಿರುಗಲು ವಲಸೆ ಕಾರ್ಮಿಕರ ನೂಕುನುಗ್ಗಲು
Update: 2020-05-04 10:11 IST
ಬೆಂಗಳೂರು, ಮೇ 4: ಕೊರೋನ ಸೋಂಕು ನಿಯಂತ್ರಣಕ್ಕಾಗಿ ಹೇರಿದ್ದ ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಿಲುಕಿರುವ ಹೊರ ರಾಜ್ಯಗಳ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಆತುರ ತೋರಿದ ಘಟನೆ ಸೋಮವಾರ ಬೆಳಗ್ಗೆ ನಡೆಯಿತು.
ಸೋಮವಾರ ನಗರದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ನೂರಾರು ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಒಮ್ಮೆಲೆ ಆಗಮಿಸಿದ್ದರಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವಿಕೆ ಸಮಸ್ಯೆಯಾಗಿತ್ತು. ಬಳಿಕ ಪೊಲೀಸರು ಕಾರ್ಮಿಕರನ್ನು ನಗರದ ಅರಮನೆ ಮೈದಾನಕ್ಕೆ ತೆರಳಲು ಪೊಲೀಸರು ಸೂಚಿಸಿ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಶ್ರಮಿಸಿದರು.
ನಗರದಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ಮತ್ತು ಕೊರೋನ ಸೋಂಕಿನ ಬಗ್ಗೆ ಪರೀಕ್ಷೆ ನಡೆಸಿದ ಬಳಿಕ ತಾವು ತೆರಳಿರುವ ರಾಜ್ಯಗಳಿಗೆ ರೈಲ್ವೆ ವ್ಯವಸ್ಥೆ ಮಾಡಿ ಕಲ್ಪಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.