ದಕ್ಷಿಣ ಆಫ್ರಿಕಾದ ಪರ ಎಲ್ಲ ಮೂರು ಮಾದರಿ ಕ್ರಿಕೆಟ್ ಆಡಲು ಬದ್ಧ: ಪ್ಲೆಸಿಸ್

Update: 2020-05-05 07:20 GMT

 ಕೇಪ್‌ಟೌನ್, ಮೇ 4: ತನ್ನ ದೇಶದ ಪರ 2020-21ರ ಋತುವಿನಲ್ಲಿ ಎಲ್ಲ ಮೂರು ಮಾದರಿ ಕ್ರಿಕೆಟ್ ಪಂದ್ಯದಲ್ಲಿ ಆಡಲು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಫ್‌ಡು ಪ್ಲೆಸಿಸ್ ಬದ್ಧತೆ ವ್ಯಕ್ತಪಡಿಸಿದ್ದು, ಇದು ಬ್ಯಾಟಿಂಗ್ ಸರದಿಯಲ್ಲಿ ಅನುಭವದ ಕೊರತೆ ಎದುರಿಸುತ್ತಿದ್ದ ಟೆಸ್ಟ್ ತಂಡಕ್ಕೆ ಹೊಸ ಉತ್ತೇಜನ ನೀಡಿದೆ. 35ರ ಹರೆಯದ ಪ್ಲೆಸಿಸ್ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕತ್ವವನ್ನು ಕ್ವಿಂಟನ್ ಡಿಕಾಕ್‌ಗೆ ಬಿಟ್ಟುಕೊಟ್ಟಿದ್ದಾರೆ. ಜುಲೈ ಅಂತ್ಯಕ್ಕೆ ನಿಗದಿಯಾಗಿರುವ ದಕ್ಷಿಣ ಆಫ್ರಿಕಾದ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ನೂತನ ಟೆಸ್ಟ್ ನಾಯಕನ ಆಯ್ಕೆ ನಡೆಯಲಿದೆ.

ಕೋವಿಡ್-19ನಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಮುಂದೂಡ ಲ್ಪಟ್ಟಿದ್ದು, ಕ್ರಿಕೆಟ್ ಕೊರತೆಯ ಕಾರಣಕ್ಕೆ ಅಂತರ್‌ರಾಷ್ಟ್ರೀಯ ಅರೆನಾದಲ್ಲಿ ಮುಂದು ವರಿಯಲು ಎದುರು ನೋಡುತ್ತಿರುವೆ ಎಂದು ಡು ಪ್ಲೆಸಿಸ್ ಹೇಳಿದ್ದಾರೆ.

ಇಂಗ್ಲೆಂಡ್‌ನಲ್ಲಿ ನಡೆದಿದ್ದ 2019ರ ಏಕದಿನ ವಿಶ್ವಕಪ್‌ನ ಬಳಿಕ 50 ಓವರ್ ಮಾದರಿ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಪ್ಲೆಸಿಸ್ ಮುಂಬರುವ ಏಕದಿನ ಅಂತರ್‌ರಾಷ್ಟ್ರೀಯ ಸರಣಿಯಲ್ಲಿ ಲಭ್ಯವಿರುವುದಾಗಿ ಘೋಷಿಸಿದ್ದಾರೆ.

‘‘ನಾನೀಗಲೂ ದಕ್ಷಿಣ ಆಫ್ರಿಕಾದ ಪರ ಆಡಲು ಇಷ್ಟಪಡುತ್ತೇನೆ. ಸ್ವತಃ ಉತ್ತಮ ವೌಲ್ಯವನ್ನು ಅಳವಡಿಸಿಕೊಳ್ಳಲು ಎದುರು ನೋಡುತ್ತಿರುವೆ. ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಆಡಲು ನಾನು ಉತ್ಸುಕನಾಗಿದ್ದೇನೆ. ನನಗೆ ಈಗಲೂ ಆಡುವ ಆಸೆ ಇದೆ. ಇದು ಆಟಗಾರರಿಗೆ ಅತ್ಯಂತ ಮುಖ್ಯ’’ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕ ಸೋಮವಾರ ಬಿಡುಗಡೆಗೊಳಿಸಿರುವ ಸಂದರ್ಶನದಲ್ಲಿ ಪ್ಲೆಸಿಸ್ ತಿಳಿಸಿದ್ದಾರೆ.

‘‘ನಾನು ನಾಯಕತ್ವದಿಂದ ವಂಚಿತನಾಗಿದ್ದೇನೆ. ಆದರೆ, ಹೊಸ ತಲೆಮಾರಿನ ಕ್ರಿಕೆಟಿಗರಿಗೆ ಸಲಹೆ ನೀಡುವ ಪಾತ್ರ ನಿಭಾಯಿಸುವೆ. ನನಗೆ ನಾಯಕತ್ವ ಎಂದರೆ ಇಷ್ಟ. 13ನೇ ವಯಸ್ಸಿನಿಂದ ನಾನು ನಾಯಕನಾಗಿದ್ದೆ. ಆಟಗಾರನಾಗುವ ಮೊದಲು ನಾಯಕನಾಗಬೇಕೆಂದು ಬಯಸಿದ್ದೆ. ನಾಯಕತ್ವವನ್ನು ಎಲ್ಲದಕ್ಕಿಂತ ಹೆಚ್ಚು ಆನಂದಿಸಿದ್ದೇನೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News