ಮತ್ತೊಂದು ತಿಂಗಳು ಮನೆ ಬಾಡಿಗೆ ಪಡೆಯದಂತೆ ನಿರ್ದೇಶಿಸಲು ಸಾಧ್ಯವೇ?: ಹೈಕೋರ್ಟ್

Update: 2020-05-07 11:54 GMT

ಬೆಂಗಳೂರು, ಮೇ.7: ಕಾರ್ಮಿಕರಿಂದ ಒಂದು ತಿಂಗಳ ಬಾಡಿಗೆ ಪಡೆಯದಂತೆ ಮನೆ ಮಾಲಕರಿಗೆ ನಿರ್ದೇಶಿಸಿ ಹೊರಡಿಸಲಾಗಿರುವ ಆದೇಶವನ್ನು ಮತ್ತೊಂದು ತಿಂಗಳಿಗೆ ವಿಸ್ತರಿಸಲು ಸಾಧ್ಯವೇ ಎಂಬ ಬಗ್ಗೆ ನಿರ್ಧಾರ ತಿಳಿಸಿ ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ.

ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ವಿಚಾರಣೆ ವೇಳೆ ಸರಕಾರಿ ವಕೀಲರು ವಾದಿಸಿ, ಕಾರ್ಮಿಕರಿಂದ ಒಂದು ತಿಂಗಳ ಮನೆ ಬಾಡಿಗೆ ವಸೂಲಿ ಮಾಡದಂತೆ ಮಾ.29ರಂದು ಸುತ್ತೋಲೆ ಹೊರಡಿಸಲಾಗಿದೆ ಎಂಬ ಅಂಶವನ್ನು ಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಸುತ್ತೋಲೆಯು ಲೈಂಗಿಕ ಕಾರ್ಯಕರ್ತರಿಗೂ ಅನ್ವಯಿಸುತ್ತದೆಯೇ ಎಂದು ಪ್ರಶ್ನಿಸಿತು. ಒಂದು ವೇಳೆ ಲೈಂಗಿಕ ಕಾರ್ಯಕರ್ತರಿಗೆ ಅನ್ವಯವಾಗದೇ ಹೋದರೆ, ಅವರ ವಿಚಾರದಲ್ಲಿಯೂ ಇದೇ ಮಾದರಿಯ ನಿರ್ಣಯ ಕೈಗೊಳ್ಳಬೇಕೆಂದು ಸೂಚಿಸಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News