ಅಂಜುಮ್ ವೌದ್ಗಿಲ್ ಖೇಲ್ ರತ್ನ, ಜಸ್ಪಾಲ್ ರಾಣಾ ದ್ರೋಣಾಚಾರ್ಯ ಪ್ರಶಸ್ತಿಗೆ ನಾಮನಿರ್ದೇಶನ

Update: 2020-05-15 05:31 GMT

 ಹೊಸದಿಲ್ಲಿ, ಮೇ 14: ನ್ಯಾಶನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್‌ಆರ್‌ಎಐ) ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನಕ್ಕೆ ಖ್ಯಾತ ಶೂಟರ್ ಅಂಜುಮ್ ಮೌದ್ಗಿಲ್ ಅವರನ್ನು ನಾಮನಿರ್ದೇಶನ ಮಾಡಿದೆ.

 ಜಸ್ಪಾಲ್ ರಾಣಾ ಅವರನ್ನು ಸತತ ಎರಡನೇ ವರ್ಷ ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗಾಗಿ ಚಾಂಪಿಯನ್ ಪಿಸ್ತೂಲ್ ಶೂಟರ್ ಸೌರಭ್ ಚೌಧರಿ ಮತ್ತು ಅಭಿಷೇಕ್ ವರ್ಮಾ ಅವರ ಹೆಸರನ್ನು ಎನ್‌ಆರ್‌ಎಐ ಶಿಫಾರಸು ಮಾಡಿ ಕಳುಹಿಸಿದೆ ಎಂದು ಫೆಡರೇಶನ್ ಮೂಲಗಳು ತಿಳಿಸಿವೆ.

ಅಂಜುಮ್ ಮೌದ್ಗಿಲ್ ಖೇಲ್ ರತ್ನಾಗೆ ನಾಮನಿರ್ದೇಶನಗೊಂಡಿದ್ದರೆ, ಎನ್‌ಆರ್‌ಎಐ ಮತ್ತೆ ಜಸ್ಪಾಲ್ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆೆ ಕಳುಹಿಸಿದೆ. ಅವರು ಯಾವಾಗಲೂ ಈ ಪ್ರಶಸ್ತಿಗೆ ಅರ್ಹರು ಮತ್ತು ಈ ಬಾರಿ ಅವರು ಅದನ್ನು ಪಡೆಯುತ್ತಾರೆ ಎಂದು ಫೆಡರೇಶನ್ ಮೂಲಗಳು ಅಭಿಪ್ರಾಯಪಟ್ಟಿವೆ. ಅರ್ಜುನ ಪ್ರಶಸ್ತಿಗೆ ಸೌರಭ್ ಚೌಧರಿ ಮತ್ತು ಅಭಿಷೇಕ್ ವರ್ಮಾ ಅವರನ್ನು ಶಿಫಾರಸು ಮಾಡಲಾಗಿದೆ.

   2008 ರಲ್ಲಿ ಶೂಟಿಂಗ್ ಪ್ರಾರಂಭಿಸಿದ 26 ವರ್ಷದ ಮೌದ್ಗಿಲ್ ಟೋಕಿಯೊ ಒಲಿಂಪಿಕ್ಸ್‌ಗೆ ಭಾರತದ ಪರ ಸ್ಥಾನ ಪಡೆದ ಮೊದಲ ಕ್ರೀಡಾಪಟು. ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಬೆಳ್ಳಿ ಜಯಿಸಿ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಕೋಟಾ ಗಳಿಸಿದರು. ಕಳೆದ ವರ್ಷ, ಮ್ಯೂನಿಚ್ ಮತ್ತು ಬೀಜಿಂಗ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ 10 ಮೀಟರ್ ಏರ್ ರೈಫಲ್ ಮಿಶ್ರ ತಂಡದ ಚಿನ್ನದ ಪದಕವನ್ನು ಪಡೆಯಲು ಮೌದ್ಗಿಲ್ ದಿವಾಂಶ್ ಸಿಂಗ್ ಪನ್ವಾರ್ ಜೊತೆ ಜೋಡಿಯಾಗಿದ್ದರು.

 ಮ್ಯೂನಿಚ್ ಮತ್ತು ರಿಯೊ ಡಿ ಜನೈರೊದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಅವರು ಫೈನಲ್ ತಲುಪಿದ್ದರು.

ಕಳೆದ ಡಿಸೆಂಬರ್‌ನಲ್ಲಿ ಭೋಪಾಲ್‌ನಲ್ಲಿ ನಡೆದ 63ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 50 ಮೀ 3 ಪಿ ಸ್ಪರ್ಧೆಯಲ್ಲಿ ಮೌದ್ಗಿಲ್ ಪ್ರಶಸ್ತಿ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News