ಡಾ.ಸುಗುಣ ಗೌಡ ಮಿತ್ತಮಜಲು

Update: 2020-05-15 06:45 GMT

ಸುಳ್ಯ, ಮೇ 15: ಸುಳ್ಯದ ಖ್ಯಾತ ವೈದ್ಯರಾಗಿದ್ದ ಡಾ. ಸುಗುಣ ಗೌಡ ಮಿತ್ತಮಜಲು(75) ಅಲ್ಪಕಾಲದ ಅಸೌಖ್ಯದಿಂದ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಶುಕ್ರವಾರ ಮುಂಜಾನೆ ನಿಧನರಾದರು.

ಸುಳ್ಯದ ಶ್ರೀರಾಮಪೇಟೆಯಲ್ಲಿ ಕ್ಲಿನಿಕ್ ಹೊಂದಿದ್ದ ಅವರು ಸ್ಥಳೀಯವಾಗಿ ಜನಪ್ರಿಯ ವೈದ್ಯರಾಗಿದ್ದರು. ಲಯನ್ಸ್ ಕ್ಲಬ್ ನಲ್ಲಿ ಸಕ್ರಿಯರಾಗಿದ್ದ ಅವರು, ಲಯನ್ ಸುಗುಣ ಗೌಡ ಎಂದೇ ಹೆಸರುವಾಸಿಯಾಗಿದ್ದರು. ಇತ್ತೀಚೆಗಿನ ಹಲವು ವರ್ಷಗಳಿಂದ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ