ಜವಾಹರಲಾಲ್ ನೆಹರೂ ಪುಣ್ಯ ತಿಥಿ ಹಿನ್ನೆಲೆ: ಪ್ರಧಾನಿ ಮೋದಿ ಗೌರವಾರ್ಪಣೆ

Update: 2020-05-27 05:31 GMT

   ಹೊಸದಿಲ್ಲಿ ಮೇ. 27.: ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರ ಲಾಲ್ ನೆಹರೂ ಅವರ 56ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಗೌರವ ಸಲ್ಲಿಸಿದರು.

ನಮ್ಮ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂಜಿ ಅವರ ಪುಣ್ಯತಿಥಿಗೆ ಗೌರವ ಸಮರ್ಪಿಸುವೆ ಎಂದು ಪ್ರಧಾನಿ ಮೋದಿ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.

ದೀರ್ಘಕಾಲ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಪಂಡಿತ್ ಜವಾಹರ ಲಾಲ್ ನೆಹರೂ ಬ್ರಿಟೀಷರ ಆಡಳಿತದ ವಿರುದ್ಧ ಭಾರತದ ಸ್ವಾತ್ರಂತ್ರಕ್ಕಾಗಿ ಹೋರಾಟ ನಡೆಸಿದ್ದರು. ಸ್ವಾತಂತ್ರ ಹೋರಾಟದ ವೇಳೆ ಹಲವು ಬಾರಿ ಜೈಲು ಶಿಕ್ಷೆ ಅನುಭವಿಸಿದ್ದರು. 1947ರಲ್ಲಿ ಸ್ವತಂತ್ರ ಭಾರತದ ಮೊದಲ ಪ್ರಧಾನಮಂತ್ರಿಯಾಗಿದ್ದರು.1964 ಮೇ 27ರಂದು ಮರಣದ ವರೆಗೂ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News