ಹೆಚ್ಚುತ್ತಿರುವ ಕೊರೋನ ಪ್ರಕರಣಗಳ ಸಾವುಗಳು: ದೆಹಲಿ ಆರ್ ಎಂ ಎಲ್ ಆಸ್ಪತ್ರೆ ಶವಾಗಾರ ಭರ್ತಿ

Update: 2020-05-31 16:55 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕೊರೋನ ವೈರಸ್ ಸೋಂಕಿನಿಂದ ಸಾವುಗಳು ಹೆಚ್ಚಾಗುತ್ತಿರುವುದರಿಂದ ಕೇಂದ್ರ ಸರ್ಕಾರಿ ಸ್ವಾಮ್ಯದ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಶವಾಗಾರ ಭರ್ತಿಯಾಗಿದ್ದು, ಶವಗಳನ್ನು ಸಂಗ್ರಹಿಸಿ ಇಡುವ ಸಲುವಾಗಿ ಆಸ್ಪತ್ರೆ ಶೀತಲೀಕರಣ ವ್ಯವಸ್ಥೆ ಹೊಂದಿದ ಕಂಟೈನರ್ ಖರೀದಿ ಮಾಡಿದೆ.

ಈ ರೆಫ್ರಿಜರೇಟೆಡ್ ಕಂಟೈನರ್‍ನಲ್ಲಿ 12 ಶವಗಳನ್ನು ದಾಸ್ತಾನು ಮಾಡಬಹುದಾಗಿದೆ ಎಂಧು ಉನ್ನತ ಮೂಲಗಳು ಹೇಳಿವೆ. ಇದನ್ನು ಸದ್ಯಕ್ಕೆ ಶವಾಗಾರದ ಪಕ್ಕದಲ್ಲಿ ಇಡಲಾಗಿದೆ ಎಂದು ಆರ್‍ಎಂಎಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಮೀನಾಕ್ಷಿ ಭಾರದ್ವಾಜ್ ಹೇಳಿದ್ದಾರೆ.

ಕಳೆದ ಫೆಬ್ರವರಿಯಿಂದ ಈ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇದುವರೆಗೆ ಒಟ್ಟು 172 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

“ನಮ್ಮ ಆಸ್ಪತ್ರೆಯ ಶವಾಗಾರ ಚಿಕ್ಕದು ಹಾಗೂ ಮುಂಜಾಗ್ರತಾ ಕ್ರಮವಾಗಿ ಶೀತಲೀಕರಣ ವ್ಯವಸ್ಥೆ ಹೊಂದಿದ ಕಂಟೈನರ್ ಖರೀದಿಸಲಾಗಿದೆ. ಕೋವಿಡ್-19 ರೋಗದ ಜತೆಗೆ ಇತರ ಕಾರಣಕ್ಕೆ ದಾಖಲಾದವರೂ ಮೃತಪಡುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಅವರು ತಿಳಿಸಿದ್ದಾರೆ.

ಇದುವರೆಗೆ ಆಸ್ಪತ್ರೆಗೆ 1412 ಕೊರೋನ ಸೋಂಕಿತರು ದಾಖಲಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News