ಸೋಮವಾರದಿಂದ ಅಭ್ಯಾಸ ಆರಂಭಿಸಲಿರುವ ಶ್ರೀಲಂಕಾ ಕ್ರಿಕೆಟಿಗರು

Update: 2020-06-01 06:28 GMT

ಕೊಲಂಬೊ, ಮೇ 31: ಶ್ರೀಲಂಕಾದ ಕ್ರಿಕೆಟ್ ಆಟಗಾರರು ಸೋಮವಾರದಿಂದ ಅಭ್ಯಾಸ ಆರಂಭಿಸಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಸಂಸ್ಥೆ (ಎಸ್‌ಎಲ್‌ಸಿ) ಹೇಳಿಕೆಯಲ್ಲಿ ತಿಳಿಸಿದೆ.

ಶ್ರೀಲಂಕಾದ 13 ಸದಸ್ಯರ ಆಯ್ದ ತಂಡವು ಕೊಲಂಬೊ ಕ್ರಿಕೆಟ್ ಗ್ರೌಂಡ್‌ನಲ್ಲಿ 12 ದಿನಗಳ ತರಬೇತಿ ಶಿಬಿರಕ್ಕೆ ಒಳಗಾಗಲಿದೆ.

 ಎಲ್ಲಾ ಮೂರು ಸ್ವರೂಪಗಳಿಂದ ಆಯ್ಕೆ ಮಾಡಲಾದ ಗುಂಪಿನಲ್ಲಿ ಬೌಲರ್‌ಗಳು ಇದ್ದಾರೆ. ನಾಲ್ಕು ಸದಸ್ಯರ ಘಟಕವು ತರಬೇತಿ ಮತ್ತು ಸಹಾಯಕ ಸಿಬ್ಬಂದಿಯನ್ನು ಒಳಗೊಂಡಿದೆ.

ಶಿಬಿರದಲ್ಲಿ ಭಾಗವಹಿಸುವ ಸದಸ್ಯರಿಗೆ ಹೊಟೇಲ್ ಆವರಣದಿಂದ ಅಥವಾ ಅಭ್ಯಾಸದ ಸ್ಥಳದಿಂದ ವೈಯಕ್ತಿಕ ವಿಷಯಗಳಿಗೆ ತೆರಳಲು ಅನುಮತಿ ನೀಡಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

 ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಸುರಕ್ಷಿತ ವಾತಾವರಣದಲ್ಲಿಡಲು ಎಸ್‌ಎಲ್‌ಸಿ ಅಗತ್ಯದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಮಾರ್ಚ್ 13 ರಂದು ಭೇಟಿ ನೀಡಿದ ಇಂಗ್ಲೆಂಡ್ ತಂಡವು ಎರಡು ದಿನಗಳ ಟೆಸ್ಟ್ ಸರಣಿಯ ಮುನ್ನ ನಾಲ್ಕು ದಿನಗಳ ಅಭ್ಯಾಸದ ಪಂದ್ಯದಲ್ಲಿ ಎರಡು ದಿನಗಳ ಕಾಲ ಅಭ್ಯಾಸ ನಡೆಸಿತ್ತು. ಬಳಿಕ ಕ್ರಿಕೆಟ್ ಸ್ಥಗಿತಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News